ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ. ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿಬಿಟ್ಟರು.
ನಟ ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ಸಪ್ತಮಿ ಗೌಡ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ಯುವ ಪತ್ನಿ ಶ್ರೀದೇವಿ ಭೈರಪ್ಪ ಉತ್ತರಿಸಿದ ಲೀಗಲ್ ನೋಟಿಸ್ ನಲ್ಲಿ ನಟಿ ಸಪ್ತಮಿ ಹೆಸರು ಉಲ್ಲೇಖಿಸಿದ್ದರು. ಯುವ ಹಾಗೂ ಸಪ್ತಮಿ ನಡುವೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಇದು ಸಪ್ತಮಿ ಗೌಡ ಕೆರಳಿಸಿದೆ. ಇದೀಗ ಶ್ರೀದೇವಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸಜ್ಜಾಗಿದ್ದಾರೆ.
ಶ್ರೀದೇವಿ ಭೈರಪ್ಪ ಆರೋಪಗಳಿಂದ ನಟಿ ಸಪ್ತಮಿ ಗೌಡ ಹಾಗೂ ಸಪ್ತಮಿ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ನಡುವಿನ ವಿಚ್ಚೇದನದಲ್ಲಿ ನಮ್ಮ ಪುತ್ರಿಯನ್ನು ಎಳೆದು ತಂದಿದ್ದೇಕೆ? ಯಾವ ಆಧಾರದಲ್ಲಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿದ್ದಾರೆ ಎಂದು ಸಪ್ತಮಿ ಪೋಷಕರು ಆಕ್ರೋಶಗೊಂಡಿದ್ದಾರೆ. ಸಪ್ತಮಿ ಗೌಡ ಜೊತೆ ಸಮಾಲೋಚಿಸಿ ಕಾನೂನು ಹೋರಾಟಕ್ಕೆ ಸಪ್ತಮಿ ಕುಟುಂಬ ನಿರ್ಧರಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


