ತುಮಕೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ತುಮಕೂರು ನಗರದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಸರ್ವ ಧರ್ಮ ಗುರುಪರಂಪರೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ .
ಫಲಪುಷ್ಪ ಪ್ರದಶನದಲ್ಲಿ ಗುರುಪರಂಪರೆಯನ್ನು ಪರಿಚಯಿಸುವ ಪ್ರಯತ್ನ ನಡೆದಿದಿದ್ದು, ತುಮಕೂರಿನ ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ನೆನಪಿಸಿಕೊಳ್ಳಲಾಗಿದ್ದು. ಅವರ ಭಾವಚಿತ್ರವನ್ನು ಸುಂದರವಾದ ತೆಂಗಿನ ಗರಿಗಳ ಕಲಾಕೃತಿಯೊಳಗೆ ಇರಿಸಿ ಪ್ರದರ್ಶಿಸಲಾಗಿದೆ.
ಅದೇ ರೀತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರುಗಳ ಸಮಾಜಸೇವೆಯನ್ನು ಬಿದಿರಿನ ಸುಂದರವಾದ ಕಲಾಕೃತಿಯಲ್ಲಿ ಇರಿಸಲಾಗಿದ್ದು ಅವರನ್ನು ನೆನಪಿಸುವ ಪ್ರಯತ್ನ ಮಾಡಲಾಗಿದೆ.
ಒಟ್ಟಾರೆ ಫಲಪುಷ್ಪ ಪ್ರದಶನದಲ್ಲಿ ಜೈನ ಧಮದ ಶ್ರೀ ಶಾಂತಿಸಾಗರ ಮುನಿಗಳ ಗುರುಪರಂಪರೆಯನ್ನು ಮತ್ತು ದಿವ್ಯಾಕಾಶ ಸಮವಸರಣವನ್ನು ನೆನಪಿಸುವ ಜಿಲ್ಲಾಢಳಿತದ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
ತುಮಕೂರಿನ ಹೊರವಲಯದಲ್ಲಿರುವ ಮಂದಾರಗಿರಿಯ ಪಿಂಚಿ ಮಂದಿರ ಮತ್ತು ದಿವ್ಯಾಕಾಶ ಸಮವರಣದ ಬೃಹತ್ ಪ್ರತಿಕೃತಿಗಳು ಜನರಲ್ಲಿ ಭಕ್ತಿಭಾವವನ್ನು ಇಮ್ಮಡಿಗೊಳಿಸುತ್ತಿವೆ. ಈ ಮೂಲ್ಕ ತುಮಕೂರು ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಜೈನ ಧಮದ ಕುರುಹುಗಳನ್ನು ಪರಿಚಯಿಸಿದೆ. ಅಲ್ಲದೆ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿವೆ.
ತುಮಕೂರು ಜಿಲ್ಲೆಯ ಮಂದರಗಿರಿ ಬೆಟ್ಟವು ಪ್ರಮುಖ ಜೈನ ಯಾತ್ರ ಕೇಂದ್ರವಾಗಿದ್ದು, ಜೈನ ಧರ್ಮವು ಕರ್ನಾಟಕದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. 81 ಅಡಿ ಎತ್ತರದ ಸುಂದರವಾದ ಪಿಂಚಿ ಮಂದಿರದ ಗುಮ್ಮಟದ ಸ್ವರೂಪದಲ್ಲಿಯೇ ಪ್ರತಿಕೃತಿ ನಿಮಿಸಲಾಗಿದೆ. ಮೇಲ್ಬಾಗ ಕೊಕ್ಕೆ ಆಕಾರವನ್ನು ಹೊಂದಿದ್ದು,ಮಂದರಗಿರಿ ಗುರು ಮಂದಿರವು ಇಂಡಿಗೋ ನೀಲಿ, ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣಗಳ ರೋಮಾಂಚಕ ನವಿಲು ಗರಿಗಳ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಇದೇ ಮಾದರಿಯಲ್ಲಿ ಅಪರೂಪದ ಪುಷ್ಪಗಳನ್ನು ಬಳಸಿ ನಿಮಿಸಲಾಗಿದೆ.
ಮಂದರಗಿರಿ ಗುರು ಮಂದಿರವು ಮೇ-2014 ರಲ್ಲಿ ಸ್ಥಾಪಿಸಲಾಗಿದೆ. 20 ನೇ ಶತಮಾನದ ದಿಗಂಬರ ಜೈನ ಆಚಾರ್ಯ ಶ್ರೀ ಶಾಂತಿ ಸಾಗರ ಮಹಾರಾಜ್ ರವರಿಗೆ ಸಮರ್ಪಿಸಲಾಗಿದೆ. ಜೈನ ಧರ್ಮದಲ್ಲಿ ನವಿಲು ಗರಿಗಳನ್ನು ಜೈನ ಸಂತರು ಅಹಿಂಸೆಯ ಸಂಕೇತವಾಗಿ ಬಳಸುತ್ತಾರೆ ಎಂಬುದನ್ನು ಫಲಪುಷ್ಪ ಪ್ರದಶನದಲ್ಲಿ ತೋಟಗಾರಿಕಾ ಇಲಾಖೆ ಪ್ರಚುರಪಡಿಸುತ್ತಿದೆ.
ಫಲಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿ ಮಂದರಗಿರಿಯ ಪಿಂಚಿಗುರು ಮಂದಿರ ಒಂದೆಡೆಯಾದ್ರೆ ಮತ್ತೊಂದಡೆ ಮಂದರಗಿರಿಯ ಬೆಟ್ಟದಲ್ಲಿ ಇರುವ ಶ್ರೀ ಮಹಾವೀರ ತೀಥಂಕರರ ದಿವ್ಯಾಕಾಶ ಸಮವರಸರಣದ ಪ್ರತಿಕೃತಿಯನ್ನು ಪ್ರದಶಿಸಲಾಗಿದೆ.
ಮಹಾವೀರ ತೀಥಂಕರರ ಸಮವರಣದ ಮಹತ್ವವನ್ನು ಕೂಡ ಇಲ್ಲಿ ಪರಿಚಯಿಸಲಾಗಿದೆ. ಸಮವರಣದ ಮಹತ್ವ ಮತ್ತು ಜಿನಧಮ ಪರಂಪರೆಯನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಈ ಮೂಲಕ ಫಲಪುಷ್ಪ ಪ್ರದಶನದಲ್ಲಿ ತುಮಕೂರು ಜಿಲ್ಲೆಯಲ್ಲಿ ಜೈನ ಧರ್ಮದ ಶ್ರೀಮಂತ ಪರಂಪರೆ ಅನಾವರಣಗೊಂಡಿದೆ ಎಂದೇ ಹೇಳಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4