ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಿಪಟೂರು ತಾಲೂಕು ಬಿದರೆಗುಡಿ ವಲಯದ ವಿನಾಯಕ ನಗರ “ಸಂಗಮ “ಜ್ಞಾನ ವಿಕಾಸ ಕೇಂದ್ರದ ಮೂಲಕ, ಈ ಸ್ವ ಉದ್ಯೋಗ ಪ್ರೇರಣಾ ಶಿಬಿರದಲ್ಲಿ 10 ದಿನಗಳ ಕಾಲ ಸಾರಿ ಕುಚ್ ತರಬೇತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವೀಣಾ ಶಿವಪ್ರಕಾಶ್, “ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬನಿಯಾಗಿ ವಿಶೇಷ ಕೌಶಲ್ಯದಿಂದ ನಿಮಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿ, ಉತ್ತಮ ತರಬೇತಿ ಪಡೆಯಿರಿ. ಶಂಕರ ತರಬೇತಿ ಸೆಂಟರ್ ನಲ್ಲಿ ಕಂಪ್ಯೂಟರ್, ಟೈಲರಿಂಗ್, ಬ್ಯಾಗ್, ಬ್ಯುಟಿಷಿಯನ್ ತರಬೇತಿ ನಡೆಯುತ್ತಿರುತ್ತದೆ. ತಾವು ಭಾಗವಹಿಸಬಹುದು ಎಂದರು.

ಈ ಸಂದರ್ಭದಲ್ಲಿ ಆರ್ಥಿಕ ಸಾಕ್ಷಾರತ ಕೇಂದ್ರದ ಆಪ್ತ ಸಮಾಲೋಚಕರು ರೇಖಾ ಮೇಡಂ ರವರು “10 ದಿನ ಸಮಯಕ್ಕೆ ಸರಿಯಾಗಿ ಬಂದು ತರಬೇತಿ ಪಡೆಯಿರಿ. ಮುಂದಿನ ದಿನಗಳಲ್ಲಿ ಬೇರೆ ಬೇರೆ ತರಬೇತಿ ಇರುವಲ್ಲಿ ತಮಗೆ ಅವಕಾಶ ನೀಡೋಣ. ಜೊತೆಗೆ ಅತ್ತ್ಯುತ್ತಮವಾಗಿ ತರಬೇತಿ ಪಡೆದು ಕುಚ್ ಕಟ್ಟಿದ ಸದಸ್ಯರನ್ನು ಗುರುತಿಸಿ ಬಹುಮಾನ ನೀಡಲಾಗುವುದು” ಎಂದು ಪ್ರೋತ್ಸಾಹ ನೀಡಿದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಂ.ಡಿ. ಮಾತಾಡಿ, “ನಿಮಗೆ ಕೊಟ್ಟಿರುವ ತರಬೇತಿಯನ್ನು ಎಲ್ಲರು ಶ್ರದ್ದೆಯಿಂದ ಪ್ರತಿ ದಿನ ಬಂದು ಕಲಿಯಿರಿ. ಹಾಗೆ ರುಡ್ ಸೆಡ್, ರ್ ಸೆಡ್, ತರಬೇತಿ ಕೇಂದ್ರದಲ್ಲಿ ನೀಡುವ ತರಬೇತಿಗಳ ಕುರಿತು ತಿಳಿಸಿದರು.
ಯೋಜನೆಯ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಾರಿ ಕುಚ್ ಹೇಳಿಕೊಡುವ ಪೂಜಾ, ಹಾಗೂ ಮೇಲ್ವಿಚಾರಕರು ಅನಿತಾ, ಸೇವಾಪ್ರತಿನಿಧಿ ತಾರ ಹಾಗೂ ಕುಸುಮ ಮತ್ತು ಸಂಗಮ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ವರದಿ: ಆನಂದ್, ತಿಪಟೂರು


