ಕೊರಟಗೆರೆ: ರಾಜ್ಯಪಾಲರ ಲೆಟರ್ ರೈಟ್ ಹಾಗೂ ಸಹಿಯನ್ನೇ ಫೋರ್ಜರಿ ಮಾಡಿ ಮುಗ್ಧ ಜನರಿಗೆ ವಂಚನೆ ಮಾಡುತ್ತಿದ್ದ ಖತರ್ನಾಕ್ ಕಳ್ಳ ಈಗ ಪೊಲೀಸರ ಅಥಿತಿಯಾಗಿದ್ದಾನೆ. RBI ಗವರ್ನರ್ ಸೀಲ್ ಮತ್ತು ಸಹಿ ಬಳಸಿ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹರಸಾಹಸ ಪಡುತ್ತಿದ್ದ ಈ ಖತರ್ನಾಕ್ ಕಳ್ಳನು ಗೃಹಸಚಿವ ಡಾ.ಜಿ. ಪರಮೇಶ್ವರ ಜೊತೆಯಲ್ಲಿ ಇರುವ ಪೋಟೋ ದುರ್ಬಳಕೆ ಮಾಡಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ 14ಪ್ರಕರಣ ದಾಖಲಾಗಿವೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ಒಂದರಲ್ಲಿಯೇ ವಿವಿಧ ದೂರುಗಳ ಅನ್ವಯ ಸುಮಾರು 13 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ.
ಬೆಂಗಳೂರು ಮೂಲದ ಕೆಲವು ದೊಡ್ಡ ದೊಡ್ಡ ಅಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡುತ್ತಿದ್ದ ಖತರ್ನಾಕ್ ಭೂಪನಾಗಿರುವ ಈ ಝುಬೇರ್ ಎನ್ನುವಾತ. ಗೃಹ ಸಚಿವರ ಆಪ್ತ, ಪಿ ಎ, ಎಂದು ಹೇಳಿಕೊಂಡು ಅಮಾಯಕರಿಗೆ 8 ಕೋಟಿಗೂ ಅಧಿಕ ಹಣ ವಂಚನೆ ಮಾಡುತ್ತಿದ್ದ.
ಈ ಆರೋಪಿಯು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಜೊತೆಯಲ್ಲಿರುವ ಫೋಟೋ ತೋರಿಸಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. ಕೊರಟಗೆರೆ ಪಟ್ಟಣದ ಖತರ್ನಾಕ್ ಜುಬೇರ್ ಎಂಬಾತನನ್ನು ಕೆಂಗೇರಿ ಪೊಲೀಸ್ ಬಂಧಿಸಿದ್ದಾರೆ.
ಕಡಿಮೆ ಬೆಲೆಗಳಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಗಳು, ಮೆಡಿಕಲ್ ಸೀಟ್, ಸ್ಮಾಲ್ ಇಂಡಸ್ಟ್ರಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ.
ನಾನು ಹೇಳಿದ ಕೆಲಸ ಆ ಕ್ಷಣ ಆಗುತ್ತದೆ ಎಂದು ಅಮಾಯಕರಿಗೆ ನಂಬಿಸಿ ದೋಖ ಮಾಡುತ್ತಿದ್ದ. ಬೆಂಗಳೂರಿನ ಕೆಂಗೇರಿ ಮೂಲದ ನಿವಾಸಿ ಸಾಯಿದ ತಬಸುಮ್ 55 ವರ್ಷದ ಮಹಿಳೆಯಿಂದ 1 ಕೋಟಿ 20 ಲಕ್ಷ ಹಣ ಹಾಗೂ 186 ಗ್ರಾಂ ಚಿನ್ನದ ವಂಚನೆಯ ದೂರು ದಾಖಲಾಗಿದೆ.
ಅಮಾಯಕರಿಗೆ ವಂಚಿಸಿ ದೋಚಿದ ಹಣದಲ್ಲಿ ಐಷಾರಾಮಿ ಜೀವನ ಇಟ್ಟಿಗೆ ಫ್ಯಾಕ್ಟರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮಕ್ಕಿನಿಂದ ಇಟ್ಟಿಗೆ ಫ್ಯಾಕ್ಟರಿ ಬಳಿ ಬೆಟ್ಟದಷ್ಟು ಅಕ್ರಮ ಮಣ್ಣು ಶೇಖರಣೆಯಾಗಿದೆ.
420 ಝುಬೇರ್ ನ ಪ್ರಕರಣಗಳು ಕೆಂಗೇರಿ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮುರಳಿ ಹಾಗೂ ತಂಡದಿಂದ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಮಹಮ್ಮದ್ ಜುಬೇರ್ ಆತನ ಪತ್ನಿ ರೂಹಿ ಜುಬೇರ್ ಹಾಗೂ ಸತೀಶ್ ಎನ್ನುವರ ಮೇಲೆ IPC section 1860 ಅಡಿಯಲ್ಲಿ u/s 506, 34, 504, 406, 420, 465, 467, 471, 468, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಂಗೇರಿ ಪೊಲೀಸ್ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆಗೆ ಕೊರಟಗೆರೆ ಪೊಲೀಸ್ ಅಧಿಕಾರಿಗಳು ಸಾತ್ ನೀಡಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಝುಬೀರ್ ಆತನ ಪತ್ನಿ ಹಾಗೂ ಸ್ನೇಹಿತ ಅಂದರ್ ಆಗಿದ್ದಾರೆ. ಹೆಚ್ಚಿನ ವಂಚನೆಗಳ ಬಗ್ಗೆ ಪೊಲೀಸ್ ವಿಚಾರಣೆಯಿಂದ ಬೆಟ್ಟದಷ್ಟು ಮಾಹಿತಿ ಹೊರ ಬರಬೇಕಾಗಿದೆ.
ಅದು ಏನೇ ಆಗಲಿ ವೀಕ್ಷಕರೆ ವಂಚನೆಗೆ ಒಳಗಾಗುವ ಅಮಾಯಕರು ಎಚ್ಚೆತ್ತುಕೊಳ್ಳುವವರೆಗೂ ಇಂತಹ ವಂಚಕರು ಇದ್ದೇ ಇರುತ್ತಾರೆ. ವಂಚನೆ ಮಾಡುತ್ತಲೇ ಇರುತ್ತಾರೆ ಎಚ್ಚರವಾಗಿರಿ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296