ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಸಂಪುಟದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಹಳಷ್ಟು ಮಂದಿ ಹಿರಿಯರು ಸಚಿವ ಸ್ಥಾನ ಪಡೆದಿದ್ದು, ಪಕ್ಷದ ಹೊಸ ಅಧ್ಯಕ್ಷ ಯಾರು ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಭೂಪೇಂದ್ರ ಯಾದವ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಧರ್ಮೇಂದ್ರ ಪ್ರಧಾನ್ ಕೂಡಾ ಸಚಿವ ಸ್ಥಾನ ಪಡೆದಿದ್ದು, ಬಿಜೆಪಿಯನ್ನು ಮುನ್ನಡೆಸಲು ಹೊಸ ಮುಖಕ್ಕೆ ಅವಕಾಶ ಸಿಗುವುದು ಖಚಿತ.
ಕಳೆದ ಬಾರಿ ಸಚಿವರಾಗಿದ್ದ ಕೆಲ ಹಳಬರಿಗೆ ಪಕ್ಷದ ಅಧ್ಯಕ್ಷ ಹುದ್ದೆಯ ಚುಕ್ಕಾಣಿ ನೀಡಿದರೂ ಆಶ್ಚರ್ಯವಿಲ್ಲ. ನಡ್ಡಾ ಅವರ ವಿಸ್ತರಿತ ಅಧ್ಯಕ್ಷಾವಧಿ ಈ ತಿಂಗಳು ಕೊನೆಗೊಳ್ಳುತ್ತದೆ. ಪಕ್ಷದ ಸಂವಿಧಾನ ಅವರಿಗೆ ಎರಡು ಹುದ್ದೆಗಳನ್ನು ಹೊಂದಲು ಅವಕಾಶ ನೀಡಿದ್ದರೂ, ಪಕ್ಷದ ಮುಖಂಡರು ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಅಧಿಕ. ದಕ್ಷಿಣ ರಾಜ್ಯಗಳ ಪ್ರಮುಖ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಗೆ ಈ ಹುದ್ದೆ ನೀಡಲಾಗುತ್ತಿದೆ ಎಂಬ ಸುಳಿವು ಲಭ್ಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


