ಬೆಂಗಳೂರು: ತುಮಕೂರನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವುದಿಲ್ಲ, ತುಮಕೂರು ಜಿಲ್ಲೆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಲೆ ಮತ್ತು ಸಂಸ್ಕೃತಿ ವಿಭಿನ್ನವಾಗಿದೆ, ಅದರ ಬಗ್ಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ತುಮಕೂರನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವುದಿಲ್ಲ. ತುಮಕೂರು ವೇಗವಾಗಿ ಬೆಳೆಯುತ್ತಿದೆ ಎಂಬುದು ನಿಜ. ನಮ್ಮ ಮೆಟ್ರೋ ಜಾಲವನ್ನು ಜಿಲ್ಲೆಗೆ ವಿಸ್ತರಿಸಲು ಮತ್ತು ಇಲ್ಲಿಗೆ ಹೆಚ್ಚಿನ ಕೈಗಾರಿಕೆಗಳನ್ನು ಆಹ್ವಾನಿಸಲು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿದರು.
ತುಮಕೂರು ಬೆಂಗಳೂರಿನ ದಕ್ಷಿಣ ಆಗಬಹುದು ಎಂದು ಕೇಳಿದಾಗ ನಾನು ಆದರೂ ಆಗಬಹುದು ಎಂದು ಹೇಳಿದ್ದೆ. ಆದರೆ ತುಮಕೂರಿನ ಜಿಲ್ಲೆಯ ಹೆಸರು ಬದಲಾಯಿಸುತ್ತೇವೆಂದು ಹೇಳಿರಲಿಲ್ಲ. ತುಮಕೂರಿನ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಅದಕ್ಕೆ ಅದರದೇ ಆದಂತ ಇತಿಹಾಸ ಸಂಸ್ಕೃತಿ ಇದೆ. ಯಾವುದೇ ಕಾರಣಕ್ಕೂ ತುಮಕೂರು ಜಿಲ್ಲೆಯ ಹೆಸರು ಬದಲಾಯಿಸುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರು ವ್ಯಾಪ್ತಿಗೆ ಸೇರಿಸುವ ಪ್ರಶ್ನೆಗೆ ನಾನು ಉತ್ತರಿಸಿದ್ದೆ. ಆದರೂ ಆಗಬಹುದು ಎಂದಿದ್ದೆ. ಆದರೆ, ತುಮಕೂರು ಹೆಸರು ಬದಲಾಯಿಸುತ್ತೇವೆ ಅಂತ ಹೇಳಿಲ್ಲ. ಜಿಲ್ಲೆಯ ಹೆಸರು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW