ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ನಲ್ಲಿರುವ ತನ್ನ ಎಲ್ಲಾ ಬೋಧಕ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ಕೊಳವೆ ಮೂಲಕ ಅನಿಲ ಪೂರೈಸಲು ಗೇಲ್ (ಇಂಡಿಯಾ) ಲಿಮಿಟೆಡ್ ನ ಅಂಗಸಂಸ್ಥೆಯಾದ ಗೇಲ್ ಗ್ಯಾಸ್ ಲಿಮಿಟೆಡ್ (ಜಿಜಿಎಲ್) ನೊಂದಿಗೆ, ಬೃಹತ್ ದೇಶೀಯ ಪೈಪ್ಡ್ ನ್ಯಾಚುರಲ್ ಗ್ಯಾಸ್ ಒಪ್ಪಂದಕ್ಕೆ ಸಹಿ ಹಾಕಿದೆ.
ಎನ್‌ಐಟಿಕೆ ಕ್ಯಾಂಪಸ್ ನಲ್ಲಿ ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಜಿಎಂಪಿಎಲ್) ಸಿಇಒ ಸುಧೀರ್ ಕುಮಾರ್ ದೀಕ್ಷಿತ್ ಅವರ ಉಪಸ್ಥಿತಿಯಲ್ಲಿ ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಮತ್ತು ಮಂಗಳೂರಿನ ಗೇಲ್ ಗ್ಯಾಸ್‌ನ ಜಿಎಂ (ಸಿಜಿಡಿ) ಪ್ರಾಜೆಕ್ಟ್ ಮತ್ತು ಮುಖ್ಯಸ್ಥ ಸಾಯಿ ಶಂಕರ್ ಬಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಸಮಾರಂಭದಲ್ಲಿ ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ.ಕೆ.ವಿ.ಗಂಗಾಧರನ್, ರಿಸರ್ಚ್ ಕನ್ಸಲ್ಟೆನ್ಸಿ ಡೀನ್ ಪ್ರೊ. ಉದಯ ಭಟ್ ಕೆ, ಅಕಾಡೆಮಿಕ್ ಡೀನ್ ಪ್ರೊ.ದ್ವಾರಕೇಶ್, ಪ್ರೊ.ಶ್ರೀಕಾಂತ ಎಸ್ ರಾವ್, ಜಂಟಿ ರಿಜಿಸ್ಟ್ರಾರ್ ರಾಮ್ ಮೋಹನ್ ವೈ ಮತ್ತು ಗೇಲ್ ಗ್ಯಾಸ್‌ನ ಮಾರ್ಕೆಟಿಂಗ್ ನ ಹಿರಿಯ ವ್ಯವಸ್ಥಾಪಕ ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296