ತುಮಕೂರು: ಸಚಿವ ಮಹಾದೇವಪ್ಪನವರ ಮನೆಗೆ ನಾವು ಹೋಗಿದ್ದೆವು ಆದ್ರೆ ಯಾವುದು ಮೀಟಿಂಗ್ ಮಾಡಿಲ್ಲ, ಭೇಟಿಯಾಗಿದ್ದೇವೆ ಅಷ್ಟೇ, ಅಲ್ಲಿ ಸಿಎಂ ಸ್ಥಾನದ ಕುರಿತಾದ ಯಾವುದೇ ಚರ್ಚೆಗಳು ನಡೆದಿಲ್ಲ ಅಂತ ಕ್ಲಾರಿಫೈ ಮಾಡುತ್ತಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅದಕ್ಕೆ ಅರ್ಥೈಸುವ ಅಗತ್ಯತೆ ಇಲ್ಲ. ನಾವು ಸಿಎಂ ಗೆ ಮಾರಲ್ ಆಗಿದ್ದೇವೆ, 136 ಶಾಸಕರು ಇದ್ದೇವೆ. ಅಲ್ಲದೆ ನಾವೆಲ್ಲ ಸಚಿವರು ಕೂಡ ಅವರ ಜೊತೆ ಇದ್ದೇವೆ ಎಂದರು.
ಒಬ್ಬರಿಬ್ಬರು ಹೋದರೆ ಅದೇನು ವಿಶೇಷತೆ ಏನಲ್ಲ. ಕನಿಷ್ಠ ಒಂದು 10 ಜನನಾದ್ರೂ ಸೇರಿದ್ರೆ ಅದನ್ನ ನೀವು ಅರ್ಥೈಸಬಹುದು. ಅದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಯಾರೂ ಬೇರೆ ಇದ್ದೇವೆ ಎಂದು ಹೇಳಿಲ್ಲವಲ್ಲ ಎಂದರು.
ಕಾಫಿ ಕುಡಿಯಲು ಹೋದರೆ ಅದು ಸಭೆ ಆಗಲ್ಲ. ಕಾಫಿ ಕುಡಿದಿದ್ದೇವೆ, ಊಟ ಮಾಡಿಲ್ಲ. ನಾವು ಸಚಿವ ಮಹದೇವಪ್ಪ ಅವರ ಮನೆಗೆ ಹೋಗಿದ್ದೆವು. ಮುಖ್ಯಮಂತ್ರಿಗಳನ್ನು ಬೇರೆ ಬೇರೆ ವಿಚಾರದಲ್ಲಿ ಭೇಟಿಯಾಗಬೇಕಿತ್ತು. ಅದಕ್ಕಾಗಿ ಸಚಿವ ಮಹದೇವಪ್ಪ ಅವರ ಮನೆಗೆ ಹೋಗಿದ್ದೆ ಎಂದರು.
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ನಂತರ ಎರಡು ಬಾರಿ ಸಿಎಂ ಆಗಿದ್ದಾರೆ. ಇನ್ನೂ ಹೊರಗಿನವರು ಹೇಗೆ ಆಗುತ್ತಾರೆ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ FIR ಆಗಿದೆ. ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296