ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ದೇಹವು ಹೃದಯಾಘಾತಕ್ಕೆ 30 ದಿನಗಳ ಮೊದಲು ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ. ಆದ್ರೆ ಸಾಕಷ್ಟು ಜನರು ಈ ಸಂಕೇತಗಳನ್ನು ನಿರ್ಲಕ್ಷಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು, ವೃದ್ಧರು ಇಬ್ಬರೂ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲ ವರ್ಗದ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ದವಡೆ, ಭುಜಗಳು, ಎದೆಯಲ್ಲಿ ನೋವು: ಹೃದಯಾಘಾತದ ಮೊದಲು ಪ್ರಮುಖ ಚಿಹ್ನೆಗಳೆಂದ್ರೆ, ಒತ್ತಡ, ನೋವು ಅಥವಾ ಎದೆಯ ಸುತ್ತಲೂ ಭಾರದ ಭಾವನೆ. ಕೆಲವು ಜನರು ತೋಳುಗಳು, ಭುಜಗಳು ಅಥವಾ ದವಡೆಯಲ್ಲಿ ನೋವು ಅನುಭವಿಸಬಹುದು. ಈ ನೋವು ಯಾವಾಗಲೂ ತೀವ್ರವಾಗಿರುವುದಿಲ್ಲ. ಕೆಲವೊಮ್ಮೆ ನೀವು ಸ್ವಲ್ಪ ಉರಿ, ಭಾರವನ್ನು ಅನುಭವಿಸಿದರೆ, ನೀವು ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಂತಹ ಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಆಮ್ಲೀಯತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಾಗಿರಬಹುದು ಎಂದು ತಪ್ಪಾಗಿ ಭಾವಿಸಬಾರದು ಎನ್ನುತ್ತಾರೆ ತಜ್ಞರು.
ದೇಹದಲ್ಲಿ ದೌರ್ಬಲ್ಯದ ಭಾವನೆ: ಹೃದಯಾಘಾತಕ್ಕೆ ಮೊದಲು ಯಾವುದೇ ಭಾರವಾದ ಮತ್ತು ಶ್ರಮದಾಯಕ ಕೆಲಸ ಮಾಡದಿದ್ದರೂ ಸಹ ನೀವು ಬೇಗನೆ ದಣಿದ ಹಾಗೂ ದುರ್ಬಲತೆಯನ್ನು ಅನುಭವಿಸಬಹುದು. ವಿಶೇಷವಾಗಿ ಈ ಲಕ್ಷಣವು ಆಗಾಗ್ಗೆ ಕಾಣಿಸಿಕೊಂಡರೆ, ಇದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು. ಇದನ್ನು ಲಘುವಾಗಿ ಪರಿಗಣಿಸಬಾರದು. ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ತಲೆತಿರುಗುವಿಕೆ: ಹೃದಯಾಘಾತಕ್ಕೆ 30 ದಿನಗಳ ಮೊದಲು ತಲೆತಿರುಗುವಿಕೆ ಮತ್ತು ಕೆಲವೊಮ್ಮೆ ಮೂರ್ಛೆ ಹೋಗುವುದು ಸಹ ಸಂಭವಿಸಬಹುದು. ಉಸಿರಾಟದ ತೊಂದರೆ, ತಲೆನೋವು ಮತ್ತು ರಕ್ತ ಪರಿಚಲನೆ ಕಡಿಮೆಯಾಗುವಂತಹ ಲಕ್ಷಣಗಳು ಈ ಅವಧಿಯಲ್ಲಿ ಸಾಮಾನ್ಯವಾಗಿದೆ. ಈ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ, ನೀವು ಯಾವಾಗಲೂ ತಲೆತಿರುಗುವಿಕೆ ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.
ಉಸಿರಾಟದ ತೊಂದರೆ: ಉಸಿರಾಟದ ತೊಂದರೆ ಕೂಡ ಒಂದು ಪ್ರಮುಖ ಲಕ್ಷಣವಾಗಿದೆ. ಸರಳ ಕೆಲಸಗಳನ್ನು ಮಾಡಿದ ನಂತರ, ಯಾವುದೇ ದೈಹಿಕ ಪರಿಶ್ರಮ ಮಾಡದೆಯೂ ನಿಮಗೆ ಉಸಿರಾಟದ ತೊಂದರೆ ಇದ್ದರೆ, ಇದು ಹೃದಯಾಘಾತದ ಸಂಕೇತವಾಗಿರಬಹುದು. ನಿಮಗೆ ಉಸಿರಾಟದ ತೊಂದರೆ ಇದ್ದರೆ, ಮೆಟ್ಟಿಲುಗಳನ್ನು ಹತ್ತುವಾಗ ಇದ್ದಕ್ಕಿದ್ದಂತೆ ಉಸಿರಾಡಲು ತೊಂದರೆಯಾದರೆ ಇದನ್ನು ನಿರ್ಲಕ್ಷಿಸಬಾರದು ಅಂತ ತಜ್ಞರು ಹೇಳುತ್ತಾರೆ.
ಹೃದಯಾಘಾತ, ಅಧಿಕ ರಕ್ತದೊತ್ತಡ, ಅನಿಯಮಿತ ಹೃದಯ ಬಡಿತ, ಈ ರೋಗಗಳು ನಿಮ್ಮ ದೇಹದಲ್ಲಿ ಸದ್ದಿಲ್ಲದೆ ನೆಲೆಗೊಳ್ಳುತ್ತವೆ. ಇದೆಲ್ಲದಕ್ಕೂ ಮೂಲ ಕಾರಣ ಹುರಿದ ಆಹಾರ, ಧೂಮಪಾನ, ಮದ್ಯಪಾನ, ನಿದ್ರೆಯ ಕೊರತೆ ಮತ್ತು ಒತ್ತಡ ಎಂದು ತಜ್ಞರು ಹೇಳುತ್ತಾರೆ.
ವಿ.ಸೂ.: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಅಂತರ್ಜಾಲಗಳಿಂದ ಸಂಗ್ರಹಿಸಿದ ಮಾಹಿತಿಗಳಾಗಿವೆ. ಇದು ಕೇವಲ ಮಾಹಿತಿಗಾಗಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ವೈದ್ಯರ ಸಲಹೆ ಅತ್ಯಗತ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC