ಪಾವಗಡ: ಶುಕ್ರವಾರ ಮಧ್ಯ ರಾತ್ರಿ 1 ಗಂಟೆಯ ಸಂದರ್ಭದಲ್ಲಿ ಪಟ್ಟಣದ ಶ್ರೀನಿವಾಸ ನಗರದಲ್ಲಿ ವಿಶ್ವಮೋಹನ್ ಗುಪ್ತಾ ಎನ್ನುವರು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಕಳೆದ ಎರಡು ದಿನಗಳಿಂದ ವಿಶ್ವಮೋಹನ್ ಗುಪ್ತಾ ಕುಟುಂಬ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿತ್ತು, ಇದರ ಸುಳಿವು ಪಡೆದುಕೊಂಡ ಕಳ್ಳರು ಶುಕ್ರವಾರ ರಾತ್ರಿ ಶ್ರೀನಿವಾಸನಗರದಲ್ಲಿ ಇರುವಂತಹ ವಿಶ್ವ ಮೋಹನ ಗುಪ್ತಾ ಅವರ ಮನೆಯ ಡೋರ್ ಲಾಕ್ ಕತ್ತರಿಸಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಲಾಕರ್ ಗಳನ್ನು ತೆಗೆದು ಚಿನ್ನಾಭರಣ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ವಿಶ್ವ ಮೋಹನ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಯೊಬ್ಬರು ವಾಸವಿದ್ದರೂ ಅವರ ಕೊಠಡಿಯ ಹೊರಭಾಗದಲ್ಲಿ ಲಾಕ್ ಮಾಡಿ ಕೃತಕ್ಕೆ ಮುಂದಾಗಿದ್ದಾರೆ ಎಂದು ಬೆಳಕಿಗೆ ಬಂದಿದ್ದು, ನಂತರ ಸ್ಥಳೀಯರಿಗೆ ಕರೆ ಮಾಡಿ ಲಾಕ್ ಓಪನ್ ಮಾಡಿಸಿ ಹೊರ ಬಂದ ಬಳಿಕ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಕೂಡಲೇ ಮನೆ ಯಜಮಾನರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಪಾವಗಡ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx