ಕಲಬುರ್ಗಿ: ಹಲ್ಕಾ ಕೆಲಸ ಮಾಡಿರುವ ಆ DCM ಒಕ್ಕಲಿಗರ ನಾಯಕರಾಗಲು ಸಾಧ್ಯವೆ!? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯತ್ನಾಳ್, “ಪ್ರಜ್ವಲ್ ಎಸಗಿರುವುದು ಅಕ್ಷಮ್ಯ ಅಪರಾಧ. ಆದರೆ ಪ್ರಕರಣ ಈಗ ನ್ಯಾಯಾಲಯದ ಸುಪರ್ದಿಯಲ್ಲಿದೆ ಮತ್ತು ಎಸ್ಐಟಿ ತನಿಖೆ ನಡೆಸುತ್ತಿದೆ, ತನಿಖೆ ಹೇಗೆ ನಡೆಯುತ್ತಿದೆ ಎಲ್ಲರೂ ನೋಡುತ್ತಿದ್ದೇವೆ. ಪ್ರಜ್ವಲ್ ಡ್ರೈವರ್ ನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಅವನನ್ನು ಯಾವ ದೇಶದ ಪಂಚತಾರಾ ಇಟ್ಟಿದ್ದೇನೆ ಅಂತ ಉಪ ಮುಖ್ಯಮಂತ್ರಿ ಹೇಳಬೇಕಲ್ವಾ? ಒಕ್ಕಲಿಗರ ದೊಡ್ಡ ಲೀಡರ್ ಆಗಬೇಕೆನ್ನುವ ಉದ್ದೇಶದಿಂದ ಇಂಥ ಹಲ್ಕಾ ಕೆಲಸ ಡಿಸಿಎಂ ಮಾಡಿದ್ದಾರೆ” ಎಂದರು.
“ಪೆನ್ ಡ್ರೈವ್ ಗಳನ್ನು ಹಂಚಿದವರು ಯಾರು? ಅವರನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಹಂಚಿದವರೆಲ್ಲ ಅಪರಾಧಿಗಳು” ಎಂದು ಹೇಳಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


