nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ

    September 4, 2026

    ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 4, 2026

    ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ

    September 4, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    • ಬಳ್ಳಾರಿ: ಗ್ರಾಮ ಒನ್ ಫ್ರಾಂಚೈಸಿ ನೇಮಕಾತಿಗೆ ಅರ್ಜಿ ಆಹ್ವಾನ
    • ತಿಪಟೂರು ಬಿಜೆಪಿ ಟಿಕೆಟ್ ವಿಚಾರ ಪ್ರಸ್ತಾಪ ಅಪ್ರಸ್ತುತ: ಶ್ರೀ ರುದ್ರಮುನಿಸ್ವಾಮೀಜಿ
    • ವಿದೇಶದಲ್ಲಿ ಉನ್ನತ ವ್ಯಾಸಂಗ: ಹೊಳೆನರಸೀಪುರದಲ್ಲಿ ‘ವಿದೇಶದಲ್ಲಿ ಅಧ್ಯಯನ 2026’ ಕಾರ್ಯಕ್ರಮದ ಪ್ರಚಾರಕ್ಕೆ ಚಾಲನೆ
    • ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಎನ್.ರಾಜಣ್ಣ ಸೂಚನೆ
    • ಮಧುಗಿರಿ: ಸಂಬಳ ಬಿಡುಗಡೆಯಾಗದ ಸಂಕಷ್ಟದಲ್ಲಿ 10 ಗ್ರಾ.ಪಂ. ನೌಕರರು: ಜೀವನ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಿಪಟೂರು ಬಿಜೆಪಿ ಟಿಕೆಟ್ ವಿಚಾರ ಪ್ರಸ್ತಾಪ ಅಪ್ರಸ್ತುತ: ಶ್ರೀ ರುದ್ರಮುನಿಸ್ವಾಮೀಜಿ
    ತಿಪಟೂರು September 4, 2026

    ತಿಪಟೂರು ಬಿಜೆಪಿ ಟಿಕೆಟ್ ವಿಚಾರ ಪ್ರಸ್ತಾಪ ಅಪ್ರಸ್ತುತ: ಶ್ರೀ ರುದ್ರಮುನಿಸ್ವಾಮೀಜಿ

    By Ganesh TumkuruSeptember 4, 2026No Comments1 Min Read
    shri rudramuniswamyji

    ತಿಪಟೂರು: ಮಾಜಿ ಶಾಸಕ ಹಾಗೂ ಮಾಜಿ ಸಚಿವ ಬಿ.ಸಿ. ನಾಗೇಶ್ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡುವ ವೇಳೆ , ಬಿ.ಸಿ ನಾಗೇಶ್  ಪುತ್ರ ವಿಶ್ವದೀಪ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕುಟುಂಬಕ್ಕೆ ರಾಜಕೀಯವಾಗಿ ಬಲ ತುಂಬಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿರುವುದು ಆ ವೇದಿಕೆಗೆ ಅಪ್ರಸ್ತುತವಾಗಿತ್ತು ಎಂದು ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ ತಿಳಿಸಿದರು.

    ನಗರದ ಶ್ರೀಮಠದ ಆವರಣದಲ್ಲಿ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಬಿ.ಸಿ. ನಾಗೇಶ್ ಅವರ ಸಂತಾಪ ಸಭೆಯಲ್ಲಿ ಟಿಕೆಟ್ ವಿಚಾರವನ್ನು ಪ್ರಸ್ತಾಪಿಸಿರುವುದು ಆ ವೇದಿಕೆಗೆ ಸೂಕ್ತವಲ್ಲ ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು.

    ಪಕ್ಷದ ವಿಚಾರ ವೈಯಕ್ತಿಕವಾಗಿದ್ದು, ಸಂತಾಪ ಸಭೆಯಲ್ಲಿ ಟಿಕೆಟ್ ವಿಚಾರ ಪ್ರಸ್ತಾಪಿಸಿರುವುದರಿಂದ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿರುವ ಅನೇಕ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೋವಾಗಿರಬಹುದು. ಯಾರನ್ನು ನಾಯಕರನ್ನಾಗಿ ಮಾಡಬೇಕು, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ತೀರ್ಮಾನಿಸುವುದು ಪಕ್ಷದ ಹಿರಿಯರು ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು.

    ಶ್ರೀಮಠ ಯಾವುದೇ ರಾಜಕೀಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಪಕ್ಷದ ಮುಖಂಡರು ಅಥವಾ ಯಾವುದೇ ಸಮಾಜದ ವ್ಯಕ್ತಿಗಳು ಮಠಕ್ಕೆ ಬಂದರೂ ಅವರನ್ನು ಗೌರವದಿಂದ ಬರಮಾಡಿಕೊಂಡು ಆಶೀರ್ವದಿಸುವುದು ಮಠದ ಪರಂಪರೆಯಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಶ್ರೀ ರುದ್ರಮುನಿಸ್ವಾಮೀಜಿ ತಿಳಿಸಿದರು.

    ವರದಿ: ಆನಂದ್, ತಿಪಟೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    shri rudramuniswamyji ತಿಪಟೂರು ಬಿಜೆಪಿ ಟಿಕೆಟ್ ಶ್ರೀ ರುದ್ರಮುನಿಸ್ವಾಮೀಜಿ
    Ganesh Tumkuru
    • Website

    Related Posts

    ಬಿ.ಸಿ.ನಾಗೇಶ್ ಕುಟುಂಬಕ್ಕೆ ಬಿಜೆಪಿ ಮಾನ್ಯತೆ ನೀಡಲಿ: ನುಡಿನಮನದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಲಹೆ

    September 3, 2026

    ಕಂಠೀರವ ಸ್ಟುಡಿಯೋದಲ್ಲಿ ‘ಕಲಾ ಕಂಠೀರವ’ ಟಿ.ಎಸ್. ಕರಿಬಸಯ್ಯ ಅವರ ಕಂಚಿನ ಪುತ್ತಳಿ ಅನಾವರಣ

    September 1, 2026

    ಈಚನೂರು ಕೆರೆಯ ಕಲುಷಿತ ನೀರು ಖಾಲಿ: 2 ನೇ ಹಂತದಲ್ಲಿ ತಿಪಟೂರು ಬರಪೀಡಿತ ಘೋಷಣೆ: ಶಾಸಕ ಕೆ.ಷಡಕ್ಷರಿ

    September 1, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ

    September 4, 2026

    ಗುಬ್ಬಿ: ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿಗೆ ಸ್ಥಳದಲ್ಲೇ ಉತ್ತರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ…

    ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 4, 2026

    ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ

    September 4, 2026

    ಬಳ್ಳಾರಿ: ಗ್ರಾಮ ಒನ್ ಫ್ರಾಂಚೈಸಿ ನೇಮಕಾತಿಗೆ ಅರ್ಜಿ ಆಹ್ವಾನ

    September 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.