ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬವಾಗಿದ್ದು, ಫ್ರಾನ್ಸ್ ಗೆ ಹಬ್ಬವಾಗಿದೆ. ಅಂಬರೀಶ್ ಅವರ ಜನ್ಮ ದಿನವನ್ನ ಅಭಿಮಾನಿಗಳು ತಮ್ಮದೇ ರೀತಿಯಲ್ಲಿಯೇ ಆಚರಿಸುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಂಬಿಗೆ ಜೈಕಾರ ಹಾಕುತ್ತಾರೆ. ಅಂಬಿಯ ಸಿನಿಮಾಗಳನ್ನ ಹೆಸರನ್ನ ಹೇಳಿ ಅಭಿಮಾನ ಮರೆಯುತ್ತಾರೆ. ಅದೇ ರೀತಿ ಈ ವರ್ಷ ಅಂಬರೀಶ್ 72 ನೇ ಜನ್ಮ ದಿನಕ್ಕೆ ಒಂದು ಕಾಮನ್ ಡಿಪಿ ಮಾಡಿದ್ದಾರೆ. ಇದು ವಿಶೇಷವಾಗಿಯೇ ಇದೆ.
ಅಂಬರೀಶ್ ಎಂದೂ ಕೊರಗಲೇ ಇಲ್ಲ ನೋಡಿ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ತುಂಬಾನೆ ಗೆಲುವಿನಿಂದಲೇ ಆ್ಯಕ್ಟ್ ಮಾಡಿದ್ದರು. ಒಳ್ಳೆ ಕಥೆಯೊಂದಿಗೆ ಈ ಚಿತ್ರದಲ್ಲಿ ಜನರನ್ನ ರಂಜಿಸೋ ಕೆಲಸ ಮಾಡಿದ್ದರು. ಗುರುದತ್ ಗಾಣಿಗ ರಂತಹ ಯುವ ನಿರ್ದೇಶಕರು ಹೇಳಿದಂತೆ ನಟಿಸಿ ಜನರ ದಿಲ್ ಕದ್ದರು. ಅಂಬರೀಶ್ ಅವರ ಈ ಚಿತ್ರದಲ್ಲಿ ಹೇ ಜಲೀಲಾ ಅನ್ನೋ ಹಾಡಿತ್ತು. ಈ ಹಾಡಿನಲ್ಲಿ ಅಂಬರೀಶ್ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದರು. ಜೋಗಿ ಪ್ರೇಮ್ ಈ ಒಂದು ಹಾಡನ್ನ ಬರೆದುಕೊಟ್ಟಿದ್ದರು. ಇದನ್ನ ವಿಜಯ್ ಪ್ರಕಾಶ್ ಹಾಡಿದ್ದರು.
ಪುಟ್ಟಣ್ಣ ಕಣಗಾಲರ ಶಿಷ್ಯ ಅಂಬರೀಶ್ ಮೊದಲು ನಾಗರಹಾವು ಚಿತ್ರದಲ್ಲಿ ನಟಿಸಿದ್ರು. ಜಲೀಲನ ಪಾತ್ರದ ಮೂಲಕ ಇಡೀ ನಾಡಿನ ಜನತೆಯ ಹೃದಯ ಗೆದ್ದರು. ಇದಾದ್ಮೇಲೆ ಪುಟ್ಟಣ್ಣ ಅವರ ರಂಗನಾಯಕಿ ಚಿತ್ರದಲ್ಲಿ ರಾಮಣ್ಣನಾಗಿಯೇ ಅಭಿನಯಿಸಿದ್ದರು. ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಕರಿಯ ಅನ್ನೋ ರೋಲ್ ಮಾಡಿದ್ದರು. ಮೃಗಾಲಯ ಇವರ ಇನ್ನೂ ಒಂದು ಅದ್ಭುತ ಚಿತ್ರವೇ ಆಗಿದೆ.
ಹೀಗೆ ತಮ್ಮ ವಿಶೇಷ ಅಭಿನಯ ಮತ್ತು ವಿಶಿಷ್ಠ ಕಂಠಸಿರಿಯಿಂದಲೇ ಅಂಬರೀಶ್ ಎಲ್ಲರ ಹೃದಯ ಗೆದ್ದು ಖಾಯಂ ಆಗಿಯೇ ಎಲ್ಲರ ಮನದಲ್ಲಿ ಉಳಿದಿದ್ದಾರೆ ಅಂತಲೇ ಹೇಳಬಹುದು. ರೆಬೆಲ್ ಸ್ಟಾರ್ ಅಂಬರೀಶ್ ಈಗಲೂ ಎಲ್ಲರ ಮನದಲ್ಲಿ ಹಾಗೆ ಇದ್ದಾರೆ. ನಾಗರಹಾವು ಜಲೀಲನಾಗಿ, ರಂಗನಾಯಕಿ ರಾಮಣ್ಣನಾಗಿ ಹೀಗೆ ಎಲ್ಲರ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಅಂತಹ ಅಂಬಿಯ ಜನ್ಮ ದಿನ ಇವತ್ತು. ಈ ದಿನ ಎಲ್ಲರೂ ಅಂಬಿಯ 72 ನೇ ಜನ್ಮ ದಿನ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


