ವೀಳ್ಯದೆಲೆ ಜೊತೆ ತುಳಸಿ ಬೀಜ ತಿಂದ್ರೆ ಹಲವು ಆರೋಗ್ಯ ಪ್ರಯೋಜನಗಳು:
ವೀಳ್ಯದೆಲೆ ಮತ್ತು ತುಳಸಿ ಬೀಜಗಳನ್ನ ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದನ್ನುಸೇವಿಸುದರಿಂದ ವಸಡು ಉರಿಯೂತ ಮತ್ತು ಹಲ್ಲುಗಳ ಹಳದಿ ಬಣ್ಣದಿಂದ ಪರಿಹಾರವನ್ನು ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗಳು ನಿವಾರಣೆಯಾಗುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಬಾಳೆಹಣ್ಣು – ತುಪ್ಪ ಜೊತೆಗೆ ತಿಂದರೆ ಇಷ್ಟೆಲ್ಲಾ ಪ್ರಯೋಜನ…!!
ಬಾಳೆಹಣ್ಣು ಮತ್ತು ತುಪ್ಪ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಪದಾರ್ಥಗಳಾಗಿವೆ. ಎರಡರಲ್ಲೂ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಳು ಸಿಗುತ್ತವೆ. ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರೊಟೀನ್, ಫೈಬರ್ ಮತ್ತು ವಿಟಮಿನ್ ಸಿಗುತ್ತದೆ. ದೈಹಿಕ ದೌರ್ಬಲ್ಯಗಳನ್ನೂ ದೂರ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಪ್ಪ ತುಂಬಾ ಉಪಯುಕ್ತವಾಗಿದೆ. ವೈರಸ್, ಜ್ವರ, ಕೆಮ್ಮು, ಶೀತ ಇತ್ಯಾದಿಗಳಿಂದ ರಕ್ಷಣೆ ನೀಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


