ತುಮಕೂರು :ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ತುಮಕೂರು-ಶಿರಾ ಮಾರ್ಗದಲ್ಲಿ ಇಂದು ಮುಂಜಾನೆಯಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ಸಮಸ್ಯೆಗೆ ವಾಹನ ಸವಾರರು ಹೈರಾಣು ಆಗಿದ್ದಾರೆ.ಇಂದು ಮುಂಜಾನೆ ಐದು ಗಂಟೆಯಿಂದಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ನಲ್ಲಿ ವಾಹನ ಸವಾರರು ಸಿಲುಕಿ ಪರದಾಡುತ್ತಿದ್ದಾರೆ.
ಆಂಬುಲೆನ್ಸ್ ಗಳು ಸಹ ಟ್ರಾಫಿಕ್ ಸಿಲುಕಿ ತುರ್ತು ತೆರಳಲು ಸಾಧ್ಯವಾಗದೆ ಟ್ರಾಫಿಕ್ ನಲ್ಲಿ ಗಂಟೆಗಟ್ಟಲೆ ಸೈರನ್ ಹೊಡೆಯುತ್ತ ನಿಂತಿವೆ.
ಹಬ್ಬಕ್ಕೆ ಹೋದವರೆಲ್ಲರೂ ವಾಪಸು ಬೆಂಗಳೂರಿಗೆ ಹೋಗುತ್ತಿರುವ ಪರಿಣಾಮ ಒಂದೆಡೆ ಆದರೆ ಇನ್ನೊಂದೆಡೆ ಹೆದ್ದಾರಿಯ ಐದು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ.
ಬೆಳಿಗ್ಗೆ ಐದು ಗಂಟೆಗೆ ಹೆದ್ದಾರಿಯಲ್ಲಿ ಸಿಲುಕಿದವರು ಬೆಳಿಗ್ಗೆ 10 ಗಂಟೆಯಾದರೂ ತುಮಕೂರು ಬಿಟ್ಟು ಹೋಗಲು ಪರದಾಡುವಂತಾಗಿದೆ.
ತುಮಕೂರಿನ ಹೊರವಲಯದ ಊರುಕೆರೆ ಬಳಿ, ಬೆಳ್ಳಾವಿ ಕ್ರಾಸ್ ಬಳಿ, ನೆಲಹಾಲ್ ಸಮೀಪ, ಕಳ್ಳಂಬೆಳ್ಳ ಸಮೀಪದಲ್ಲಿ ಎರಡು ಸೇತುವೆ ಕಾಮಗಾರಿ ನಡೆಯುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296