ಶಿವಮೊಗ್ಗ: ಬಿರುಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆಯಿತ್ತು. ಆದ್ರೆ, ಕಲ್ಲಂಗಡಿ ಹಣ್ಣಿಗೆ ಕಲರ್ ಇಂಜೆಕ್ಷನ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳ ಹಿನ್ನೆಲೆ ವ್ಯಾಪಾರಿಗಳು ಮಾತ್ರವಲ್ಲ, ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ತಮಿಳುನಾಡು, ಆಂಧ್ರಪ್ರದೇಶದಿಂದ ಬೇಡಿಕೆಗೂ ಮೀರಿ ಅತಿ ಹೆಚ್ಚು ಕಲ್ಲಂಗಡಿ ಅಮದಾಗಿದೆ. ಅಲ್ಲದೆ, ರಾಸಾಯನಿಕ ಸೇರ್ಪಡೆ ವದಂತಿಯಿಂದ ಇಲ್ಲಿನ ರೈತರು ಬೆಳೆದ ಕಲ್ಲಂಗಡಿಗೆ ಬೇಡಿಕೆ ಕುಸಿದಿದೆ. ಇದರಿಂದ ರೈತರು ಬೆಳೆಯನ್ನು ಮಾರಾಟ ಮಾಡಲು ಆಗದೆ, ಹೊಲದಲ್ಲಿ ಬಿಡಲು ಆಗದೆ ನಷ್ಟ ಅನುಭವಿಸುವಂತಾಗಿದೆ.
ಉತ್ತಮ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಅತಿ ಹೆಚ್ಚು ರೈತರು ಕಲ್ಲಂಗಡಿ ಬಿತ್ತನೆ ಮಾಡಿದ್ದರು. ಉತ್ತಮ ವಾತಾವರಣವಿದ್ದ ಹಿನ್ನೆಲೆಯಲ್ಲಿ ಇಳುವರಿಯೂ ಹೆಚ್ಚಾಗಿದೆ. ಆದರೆ, ಪ್ರಸ್ತುತ ಹೋಲ್ಸೇಲ್ ಮಾರಾಟಗಾರರು ರೈತರಿಂದ 8, 10 ರೂ.ಗೆ ಕಲ್ಲಂಗಡಿ ಖರೀದಿಸುತ್ತಿದ್ದಾರೆ.
ಅಕ್ಟೋಬರ್ನಲ್ಲಿ ಕೆಜಿಗೆ 18 ರೂ., ನವೆಂಬರ್ನಲ್ಲಿ ಕೆಜಿಗೆ 10-12 ರೂ. ಬೆಲೆ ಇತ್ತು. ಆದರೆ ಈಗ ಪಾತಾಳಕ್ಕೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲೆ ಕಲ್ಲಂಗಡಿ ಪ್ರತಿ ಕೆಜಿಗೆ 15-20 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ಒಂದು ಲೋಡ್ ಕಲ್ಲಂಗಡಿ ಮೂರು ದಿನದಲ್ಲಿ ಖಾಲಿ ಆಗುತ್ತಿತ್ತು. ಆದರೆ, ಈ ಬಾರಿ ಹತ್ತು ದಿನಗಳಾದರೂ ಹಣ್ಣು ಖಾಲಿಯಾಗುತ್ತಿಲ್ಲ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4