ವಾಷಿಂಗ್ಟನ್: ಆ್ಯಪಲ್ ಕಂಪನಿ ತನ್ನ ತಯಾರಿಕಾ ಘಟಕಗಳನ್ನು ತೆರೆಯಲು ಭಾರತಕ್ಕೆ ಹೋಗಲು ಅಭ್ಯಂತರವಿಲ್ಲ. ಆದರೆ ಅದು ತನ್ನ ಉತ್ಪನ್ನಗಳನ್ನು ಅಮೆರಿಕದಲ್ಲಿ ಸುಂಕವಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾಕೀತು ಮಾಡಿದ್ದಾರೆ.
ಓವಲ್ ಕಚೇರಿಯಲ್ಲಿ ಅಮೆರಿಕದ ಪರಮಾಣು ಶಕ್ತಿಯನ್ನು ವರ್ಧಿಸುವ ಸಲುವಾಗಿ ವಿವಿಧ ಕಾರ್ಯಾದೇಶಗಳಿಗೆ ಸಹಿ ಮಾಡುವಾಗ ಟ್ರಂಪ್ ಈ ಮಾತುಗಳನ್ನಾಡಿದ್ದಾರೆ. ಆದರೆ ಟಿಮ್ (ಕುಕ್) ಈ ಕೆಲಸ ಮಾಡಲಾರರು ಎಂದು ನಾನು ಭಾವಿಸಿದ್ದೇನೆ. ಅವರು ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಭಾರತಕ್ಕೆ ಹೋಗುವುದಾಗಿ ಹೇಳಿದರು.
ಆಗ ನಾನು ನೀವು ಭಾರತಕ್ಕೆ ತೆರಳಲು ಅಡ್ಡಿ ಇಲ್ಲ. ಆದರೆ ನಿಮ್ಮ ಉತ್ಪನ್ನಗಳನ್ನು ಅಮೆರಿಕದಲ್ಲಿ ಸುಂಕ ಪಾವತಿಸದೆ ಮಾರುವಂತಿಲ್ಲ ಎಂದು ಹೇಳಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW