ಬೆಂಗಳೂರು: ತಿರುಪತಿಯ ಲಡ್ಡು ವಿವಾದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ತಿರುಪತಿ ತಿರುಮಲ ದೇಗುಲದಿಂದ ಇನ್ನೂ ಹೆಚ್ಚಿನ ತುಪ್ಪಕ್ಕೆ ಬೇಡಿಕೆ ಬಂದಿದೆ.
ಈಗಾಗಲೇ ಕಳೆದ 1 ವರ್ಷದಲ್ಲಿ 3200 ಮೆಟ್ರಿಕ್ ಟನ್ತುಪ್ಪ ಟಿಟಿಡಿಗೆ ಪೂರೈಕೆ ಮಾಡಲಾಗಿದ್ದು, ಈಗ ಮತ್ತೆ 2000 ಮೆಟ್ರಿಕ್ ಟನ್ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಡಲಾಗಿದೆ.
ಲಡ್ಡು ವಿವಾದ ಬಳಿಕ ಬೇರೆ ಸಂಸ್ಛೆಗಳಿಂದ ತುಪ್ಪ ಖರೀದಿ ಮಾಡಲು ಟಿಟಿಡಿ ಹಿಂದೇಟು ಹಾಕುತ್ತಿದೆ. ಟಿಟಿಡಿಗೆ ವಾರ್ಷಿಕ 3,200 ಟನ್ ಆಗಿರುತ್ತದೆ. ಇಷ್ಟೂ ಪ್ರಮಾಣದ ತುಪ್ಪವನ್ನು ಟಿಟಿಡಿ ಕೆಎಂಎಫ್ ನಿಂದಲೇ ಪೂರೈಸಿಕೊಳ್ಳಲು ನಿರ್ಧರಿಸಿದೆ. ನಂದಿನಿ ತುಪ್ಪವನ್ನು ಮಾತ್ರ ಖರೀದಿಸಲು ಟಿಟಿಡಿ ನಿರ್ಧರಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4