nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅನ್ನದಾತನ ಹಕ್ಕಿಗಾಗಿ ‘ತುಮಕೂರು ಚಲೋ’ ಮಹಾ ಸಂಗ್ರಾಮ: ಕಡತಗಳಲ್ಲಿ ಕೊಳೆಯುತ್ತಿರುವ ಬಗರ್ ಹುಕುಂ ಅರ್ಜಿಗಳಿಗೆ ಮುಕ್ತಿ ಯಾವಾಗ?

    November 29, 2026

    ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಮಣಿದ ಸರ್ಕಾರ: 2,000 ರೂ. ಗೌರವಧನ ಹೆಚ್ಚಳದ ಲಿಖಿತ ಭರವಸೆ

    November 29, 2026

    ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ

    November 29, 2026
    Facebook Twitter Instagram
    ಟ್ರೆಂಡಿಂಗ್
    • ಅನ್ನದಾತನ ಹಕ್ಕಿಗಾಗಿ ‘ತುಮಕೂರು ಚಲೋ’ ಮಹಾ ಸಂಗ್ರಾಮ: ಕಡತಗಳಲ್ಲಿ ಕೊಳೆಯುತ್ತಿರುವ ಬಗರ್ ಹುಕುಂ ಅರ್ಜಿಗಳಿಗೆ ಮುಕ್ತಿ ಯಾವಾಗ?
    • ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಮಣಿದ ಸರ್ಕಾರ: 2,000 ರೂ. ಗೌರವಧನ ಹೆಚ್ಚಳದ ಲಿಖಿತ ಭರವಸೆ
    • ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ
    • ರಾಜ್ಯದಾದ್ಯಂತ ಮಳೆಗೆ ಬ್ರೇಕ್: ಮುಂದಿನ ಮೂರು ದಿನ ಒಣಹವೆ ಮುಂದುವರಿಕೆ
    • ಗ್ರಾಹಕರಿಗೆ ಕೊಂಚ ರಿಲೀಫ್: ನವೆಂಬರ್ 29ರಿಂದ ನಂದಿನಿ ಮೊಸರು ದರ ಇಳಿಕೆ
    • ಬೆಂಗಳೂರಿನಲ್ಲಿ ನ. 30ರಂದು ಬೃಹತ್ ರೈತ ಪ್ರತಿಭಟನಾ ಸಭೆ: ಪುತ್ತೂರಿನಿಂದ ವಿಶೇಷ ಬಸ್ ವ್ಯವಸ್ಥೆ
    • ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ
    • ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅನ್ನದಾತನ ಹಕ್ಕಿಗಾಗಿ ‘ತುಮಕೂರು ಚಲೋ’ ಮಹಾ ಸಂಗ್ರಾಮ: ಕಡತಗಳಲ್ಲಿ ಕೊಳೆಯುತ್ತಿರುವ ಬಗರ್ ಹುಕುಂ ಅರ್ಜಿಗಳಿಗೆ ಮುಕ್ತಿ ಯಾವಾಗ?
    ಲೇಖನ November 29, 2026

    ಅನ್ನದಾತನ ಹಕ್ಕಿಗಾಗಿ ‘ತುಮಕೂರು ಚಲೋ’ ಮಹಾ ಸಂಗ್ರಾಮ: ಕಡತಗಳಲ್ಲಿ ಕೊಳೆಯುತ್ತಿರುವ ಬಗರ್ ಹುಕುಂ ಅರ್ಜಿಗಳಿಗೆ ಮುಕ್ತಿ ಯಾವಾಗ?

    By Ganesh TumkuruNovember 29, 2026No Comments3 Mins Read
    tumakuru chalo
    nataraj gl
    ನಟರಾಜು ಜಿ. ಎಲ್.,
    ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ

    “ಉಳುವವನೇ ಹೊಲದೊಡೆಯ” ಎಂಬುದು ಕರ್ನಾಟಕದ ಭೂಸುಧಾರಣೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟಿರುವ ಕ್ರಾಂತಿಕಾರಿ ಘೋಷಣೆ. ಆದರೆ, ಇಂದಿನ ಮಧುಗಿರಿ ತಾಲೂಕಿನ ಬಗರ್ ಹುಕುಂ ಸಾಗುವಳಿದಾರ ರೈತರ ದಯನೀಯ ಸ್ಥಿತಿಯನ್ನು ಕಂಡಾಗ, ಈ ಘೋಷಣೆ ಕೇವಲ ಭಾಷಣಗಳಿಗೆ ಮತ್ತು ಕಾಗದದ ಕಡತಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಹತ್ತಾರು ವರ್ಷಗಳಿಂದ ಕಲ್ಲು–ಮುಳ್ಳುಗಳಿಂದ ಕೂಡಿದ್ದ ಬರಡು ಸರ್ಕಾರಿ ಭೂಮಿಯನ್ನು ಹಸನಾಗಿಸಿ, ತಮ್ಮ ರಕ್ತ–ಬೆವರು ಸುರಿಸಿ ಕೃಷಿ ಮಾಡುತ್ತಿರುವ ಬಡ, ಸಣ್ಣ ಮತ್ತು ಅತಿ ಸಣ್ಣ ರೈತರು ಇಂದು ತಮ್ಮದೇ ಭೂಮಿಯ ಹಕ್ಕುಪತ್ರಕ್ಕಾಗಿ (ಸಾಗುವಳಿ ಚೀಟಿ) ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

    ಮಧುಗಿರಿ ತಾಲೂಕಿನಾದ್ಯಂತ ಸಾವಿರಾರು ಬಡ ರೈತರು ತಾವು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸುವಂತೆ ಕೋರಿ ಸರ್ಕಾರದ ನಿಯಮಾನುಸಾರ ಫಾರಂ ನಂ. 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ವರ್ಷಗಳೇ ಉರುಳಿದರೂ, ತಾಲೂಕಿನಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸಭೆ ನಿಯಮಿತವಾಗಿ ನಡೆಯದ ಕಾರಣ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಗಳಲ್ಲಿ ಧೂಳು ಹಿಡಿಯುತ್ತಿವೆ.

    ಒಂದು ಕಡೆ ಹಕ್ಕುಪತ್ರ ಇಲ್ಲದ ಕಾರಣ ಬಡ ರೈತರಿಗೆ ಸರ್ಕಾರದ ಕೃಷಿ ಯೋಜನೆಗಳು, ಬೆಳೆ ವಿಮೆ, ಬ್ಯಾಂಕ್ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಮತ್ತೊಂದೆಡೆ, ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಒಕ್ಕಲೆಬ್ಬಿಸುವ ಆತಂಕ ರೈತರನ್ನು ನಿತ್ಯವೂ ಕಾಡುತ್ತಿದೆ. ಸಭೆ ಕರೆಯಲು ಇರುವ ತಾಂತ್ರಿಕ ಅಡಚಣೆಗಳಾದರೂ ಏನು? ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಈ ನಿರ್ಲಕ್ಷ್ಯಕ್ಕೆ ಬಡ ಅನ್ನದಾತ ಏಕೆ ಬಲಿಯಾಗಬೇಕು?

    ಆಡಳಿತ ವ್ಯವಸ್ಥೆಯ ಈ ಜಡತ್ವವನ್ನು ಬಡಿದೆಬ್ಬಿಸಲು ಮಧುಗಿರಿಯಿಂದ ತುಮಕೂರು ಜಿಲ್ಲಾಡಳಿತ ಕಚೇರಿಯವರೆಗೆ ಹಮ್ಮಿಕೊಂಡಿರುವ ‘ತುಮಕೂರು ಚಲೋ’ ಬೃಹತ್ ಕಾಲ್ನಡಿಗೆ ಜಾಥಾ ಒಂದು ಐತಿಹಾಸಿಕ ಜನಚಳವಳಿಯ ರೂಪ ಪಡೆದುಕೊಂಡಿದೆ. ಈ ಹೋರಾಟಕ್ಕೆ ನಾಡಿನ ಹಿರಿಯ ಹೋರಾಟಗಾರರು, ಕಾನೂನು ತಜ್ಞರು, ಪತ್ರಕರ್ತರು ಹಾಗೂ ವಿವಿಧ ಪ್ರಗತಿಪರ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಹೆಗಲು ಕೊಟ್ಟು ನಿಂತಿರುವುದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆ.

    ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರಾದ ಜಟ್ಟಿ ಅಗ್ರಹಾರ ನಾಗರಾಜು (ಟೈಗರ್ ನಾಗ್), ಸಾಮಾಜಿಕ ಚಿಂತಕರಾದ ಕಸವನಹಳ್ಳಿ ರಮೇಶ್, ಬೆಂಗಳೂರಿನ ಹಿರಿಯ ಹೋರಾಟಗಾರ ಹೆಚ್. ಎಂ. ವೆಂಕಟೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನರಸಿಂಹಯ್ಯ ಜನಕಲೋಟಿ, ಪತ್ರಕರ್ತ ಹಾಗೂ ಹೋರಾಟಗಾರ ಸಿದ್ದೇಶ್ ಎನ್. ಎಸ್. ನೇಗಲಾಲ, ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರು ಈ ಹೋರಾಟಕ್ಕೆ ನೈತಿಕ ಶಕ್ತಿ ತುಂಬಿದ್ದಾರೆ.

    ಇದರೊಂದಿಗೆ ಕಾನೂನು ಹೋರಾಟದ ಬಲ ನೀಡಲು ಬೆಂಗಳೂರಿನ ವಕೀಲರು ಹಾಗೂ ಹೋರಾಟಗಾರರಾದ ಕೆ. ಎನ್. ಜಗದೀಶ್, ಮಧುಗಿರಿಯ ಅಡ್ವೊಕೇಟ್ ಪುಟ್ಟಮ್ಮ ಜಿ. ವಿ., ವಕೀಲರಾದ ಕೊಡ್ಲಾಹಳ್ಳಿ ಪರಮೇಶ್ವರಾದ್ಯ ಹಾಗೂ ಕಾನೂನು ವಿದ್ಯಾರ್ಥಿ ದೇವರಾಜು ಆರ್. ಕೈಜೋಡಿಸಿದ್ದಾರೆ.

    ಅಲ್ಲದೆ, ವಿವಿಧ ಸಂಘಟನೆಗಳ ಪ್ರಮುಖರಾದ ಸಾಮಾಜಿಕ ಹೋರಾಟಗಾರ ಹಂದ್ರಾಳ ನಾಗಭೂಷಣ್,  ಟಿ.ಹೆಚ್.ಮೈಲಾರಪ್ಪ ತಿಪ್ಪಾಪುರ (KDSO(R) ರಾಜ್ಯಾಧ್ಯಕ್ಷರು, ಶೋಷಿತರ ಭೂಮಿ ಹಕ್ಕು ಹೋರಾಟ ಸಮಿತಿ), ಪಿ.ಎನ್.ರಾಮಯ್ಯ (ಡಿ.ಎಸ್.ಎಸ್. ಜಿಲ್ಲಾಧ್ಯಕ್ಷರು, ತುಮಕೂರು), ನರಸಿಂಹರಾಜು ಸಿ. ಎನ್. (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ ಸಿ/ಎಸ್‌ ಟಿ ಘಟಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಮಂಜುಸ್ವಾಮಿ ಎಂ. ಎನ್. (ಅಧ್ಯಕ್ಷರು, ಕರ್ನಾಟಕ ರಣಧೀರರ ವೇದಿಕೆ), ರಂಗನಾಥ್ ಆರ್. ಎಸ್. (ಉಪಾಧ್ಯಕ್ಷರು, ಕರ್ನಾಟಕ ಕನ್ನಡ ಪರ ವೇದಿಕೆ), ನಟರಾಜು ಕೆ.ಎನ್. (ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಕೊರಟಗೆರೆ), ನಟರಾಜ್ ಮೌರ್ಯ ಎನ್. (ತಾಲೂಕು ಅಧ್ಯಕ್ಷರು, ಭೀಮ್ ಆರ್ಮಿ, ಮಧುಗಿರಿ), ಶ್ರೀನಿವಾಸ ಎಸ್. (ಕರ್ನಾಟಕ ಜನಪರ ಹೋರಾಟ ಸಮಿತಿ (ರಿ) ಹಾಗೂ ಮುಖಂಡರಾದ ಶಿವಕುಮಾರ್ (ಅಧ್ಯಕ್ಷರು, ಸಹಕಾರ ಸಂಘ ಮಧುಗಿರಿ ಹಾಗೂ ಮಾಜಿ ಗ್ರಾ.ಪಂ. ಸದಸ್ಯರು, ತಾಯಿಗೊಂಡನಹಳ್ಳಿ), ಜೆ. ಸಿ. ಬಿ. ವೆಂಕಟೇಶ್, ರಂಟವಾಳ ಪ್ರಸನ್ನ ಕುಮಾರ್ (ಪ್ರಜಾಸೇನ ಕರ್ನಾಟಕ), ಪ್ರಕಾಶ್ (ಸಮೃದ್ಧಿ ಫೌಂಡೇಶನ್), ನೀರಾವರಿ ಹೋರಾಟಗಾರ ಮಧು (ಚಿಕ್ಕನಾಯಕನಹಳ್ಳಿ), ಚೇತನ್ ದಾಸರಹಳ್ಳಿ, ಶ್ರೀನಿವಾಸ ಹಾಗೂ ವಿನಯ್ ದುಡ್ಡನಹಳ್ಳಿ ಸೇರಿದಂತೆ ಅನೇಕರು ಈ ಜನಪರ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಬಿಸಿಲು–ಮಳೆಯೆನ್ನದೆ ಹತ್ತಾರು ಕಿಲೋಮೀಟರ್ ಹೆಜ್ಜೆ ಹಾಕಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲಿಗೆ ಬರುತ್ತಿರುವ ಅನ್ನದಾತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಜಿಲ್ಲಾಡಳಿತವು ಈ ಜಾಥಾವನ್ನು ಕೇವಲ ಒಂದು ಪ್ರತಿಭಟನೆಯಾಗಿ ನೋಡದೆ, ಬಡ ರೈತರ ಬದುಕಿನ ಪ್ರಶ್ನೆಯಾಗಿ ಪರಿಗಣಿಸ ಬೇಕು.

    ಜಿಲ್ಲಾಡಳಿ ತಕ್ಷಣವೇ ಮಧುಗಿರಿ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸಭೆಯನ್ನು ತಕ್ಷಣವೇ ನಿಗದಿಪಡಿಸಿ, ಬಾಕಿ ಇರುವ ಫಾರಂ ನಂ. 50, 53 ಮತ್ತು 57ರ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿ ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪಾರದರ್ಶಕವಾಗಿ ಅರ್ಹ ಬಡ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು.  ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಬಡ ಸಾಗುವಳಿದಾರರನ್ನು ಭೂಮಿಯಿಂದ ಒಕ್ಕಲೆಬ್ಬಿಸದಂತೆ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸ್ಪಷ್ಟ ಆದೇಶ ನೀಡಬೇಕು ಎನ್ನುವುದು ಹೋರಾಟಗಾರರ ಒತ್ತಾಯವಾಗಿದೆ.

    “ನಾನು ಬರುತ್ತೇನೆ, ನೀವು ಬನ್ನಿ, ನಿಮ್ಮವರನ್ನೂ ಕರೆತನ್ನಿ!” ಎಂಬುದು ಕೇವಲ ಜಾಥಾದ ಘೋಷವಾಕ್ಯವಲ್ಲ; ಅದು ಅನ್ಯಾಯದ ವಿರುದ್ಧ ಸಿಡಿದೇಳುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆತ್ಮಸಾಕ್ಷಿಯ ಕರೆಯಾಗಿದೆ. ಅನ್ನ ನೀಡುವ ರೈತ ಇಂದು ತನ್ನ ಹಕ್ಕಿನ ಭೂಮಿಗಾಗಿ ಬೀದಿಯಲ್ಲಿ ನಡೆಯುತ್ತಿದ್ದಾನೆ ಎಂದರೆ, ಆತನ ಬೆಂಬಲಕ್ಕೆ ನಿಲ್ಲುವುದು ಸಮಾಜದ ಪ್ರತಿಯೊಬ್ಬರ ನೈತಿಕ ಕರ್ತವ್ಯ.

    ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮಧುಗಿರಿ ರೈತರಿಗೆ ನ್ಯಾಯ ಒದಗಿಸಿಕೊಡಲಿ. ಬಡವರ, ರೈತರ ಹಾಗೂ ಶೋಷಿತರ ಪರವಾದ ಈ ನ್ಯಾಯಯುತ ಹೋರಾಟಕ್ಕೆ ‘ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ’ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಅನ್ನದಾತನಿಗೆ ನ್ಯಾಯ ಸಿಗುವವರೆಗೂ ನಮ್ಮ ಲೇಖನಿ ವಿಶ್ರಮಿಸುವುದಿಲ್ಲ.

    — ನಟರಾಜು ಜಿ. ಎಲ್., ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ

    ಸಂಪರ್ಕ: 9741717700 | nammatumakuru9@gmail.com


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಶಿವಣ್ಣ ಮಾಡಬೇಕಿದ್ದ ಆ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದು ಡಾ.ರಾಜ್‌ ಕುಮಾರ್! ಆ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತಾ?

    November 28, 2026

    ಅಂಡರ್–23 ಟೆನ್‌ ಪಿನ್ ಬೌಲಿಂಗ್‌ ನಲ್ಲಿ ಎಕಲವ್ಯ ಮತ್ತು ವೈಧಿಕಾ ಚಾಂಪಿಯನ್

    November 27, 2026

    ಕನಕದಾಸರೆಂದರೆ ಭಕ್ತಿ ಮತ್ತು ಮಾನವೀಯತೆಯ ಸಂದೇಶ

    November 27, 2026

    Leave A Reply Cancel Reply

    Our Picks

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?

    November 27, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಅನ್ನದಾತನ ಹಕ್ಕಿಗಾಗಿ ‘ತುಮಕೂರು ಚಲೋ’ ಮಹಾ ಸಂಗ್ರಾಮ: ಕಡತಗಳಲ್ಲಿ ಕೊಳೆಯುತ್ತಿರುವ ಬಗರ್ ಹುಕುಂ ಅರ್ಜಿಗಳಿಗೆ ಮುಕ್ತಿ ಯಾವಾಗ?

    November 29, 2026

    “ಉಳುವವನೇ ಹೊಲದೊಡೆಯ” ಎಂಬುದು ಕರ್ನಾಟಕದ ಭೂಸುಧಾರಣೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟಿರುವ ಕ್ರಾಂತಿಕಾರಿ ಘೋಷಣೆ. ಆದರೆ, ಇಂದಿನ ಮಧುಗಿರಿ ತಾಲೂಕಿನ ಬಗರ್…

    ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಮಣಿದ ಸರ್ಕಾರ: 2,000 ರೂ. ಗೌರವಧನ ಹೆಚ್ಚಳದ ಲಿಖಿತ ಭರವಸೆ

    November 29, 2026

    ಸಿದ್ದರಬೆಟ್ಟ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ |  241ನೇ ಬೆಳದಿಂಗಳ ಕೂಟ ಹಾಗೂ ಧರ್ಮ ಸಮಾರಂಭ; ನಿವೃತ್ತ ಐಎಎಸ್ ಅಧಿಕಾರಿ ದಂಪತಿಗೆ ಶ್ರೀಮಠದಿಂದ ಸನ್ಮಾನ

    November 29, 2026

    ರಾಜ್ಯದಾದ್ಯಂತ ಮಳೆಗೆ ಬ್ರೇಕ್: ಮುಂದಿನ ಮೂರು ದಿನ ಒಣಹವೆ ಮುಂದುವರಿಕೆ

    November 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.