ಪುತ್ತೂರು: ಭಾರತೀಯ ಕಿಸಾನ್ ಸಂಘ (ಕರ್ನಾಟಕ ಪ್ರದೇಶ) ಇದರ ವತಿಯಿಂದ ನವೆಂಬರ್ 30, ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ರೈತ ಪ್ರತಿಭಟನಾ ಸಭೆ ನಡೆಯಲಿದೆ.
ಈ ಪ್ರತಿಭಟನೆಯಲ್ಲಿ ಪುತ್ತೂರು ತಾಲೂಕು ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರೈತರು ಭಾಗವಹಿಸಲಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಖಾಸೀನ (ಎಕ್ಸಿಕ್ಯೂಟಿವ್ ಕ್ಲಾಸ್) ಬಸ್ ವ್ಯವಸ್ಥೆ ಮಾಡಲಾಗಿದ್ದು, ನವೆಂಬರ್ 29ರ ರಾತ್ರಿ 9:30ಕ್ಕೆ ಪುತ್ತೂರಿನಿಂದ ಬಸ್ ಹೊರಟು ಮರುದಿನ ಬೆಳಿಗ್ಗೆ ಬೆಂಗಳೂರನ್ನು ತಲುಪಲಿದೆ. ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಇರಲಿದೆ.
ಪ್ರಮುಖ ಬೇಡಿಕೆಗಳು:
- ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗಾಗುತ್ತಿರುವ ಬೆಳೆ ಹಾನಿ ಮತ್ತು ತೊಂದರೆಗಳಿಗೆ ಶಾಶ್ವತ ಪರಿಹಾರ.
- ರೈತರ ಕೋವಿ ಪರವಾನಗಿ ನವೀಕರಣ ಹಾಗೂ ಚುನಾವಣಾ ಸಂದರ್ಭದಲ್ಲಿ ಕೋವಿ ಠೇವಣಿ ಇರಿಸುವ ನಿಯಮಗಳ ಸರಳೀಕರಣ.
- ಕಸ್ತೂರಿರಂಗನ್ ವರದಿ ಜಾರಿ ಕುರಿತಾದ ಆತಂಕಗಳು.
- ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯ ಅವೈಜ್ಞಾನಿಕ ಪರಿಹಾರ ವಿತರಣೆ ಸರಿಪಡಿಸುವುದು.
- ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಆನೆ ಕಾರ್ಯಪಡೆಗೆ (ETF) ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದು.
- ರೈತರಿಗೆ ಕೈಗೆಟುಕುವ ದರದಲ್ಲಿ ನಿರಂತರವಾಗಿ ಮರಳು ಲಭ್ಯವಾಗುವಂತೆ ದರ ನಿಗದಿಪಡಿಸುವುದು.
‘ಆನೆ ಮಾಹಿತಿ’ ಗ್ರೂಪ್ನಿಂದ ಬೆಂಗಳೂರಿಗೆ ತೆರಳಲು 25 ಮಂದಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ರೈತರು ಮುಂಚಿತವಾಗಿ ಮೊಬೈಲ್ ಸಂಖ್ಯೆ 9449901817 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
