ತುಮಕೂರು: ಸರ್ಕಾರಿ ಫೈನ್ ಆರ್ಟ್ಸ್ ಪದವಿ ಕಾಲೇಜಿನಲ್ಲಿ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
2025ರ ಈ ದಿನವು ಭಾರತದ ಚುನಾವಣಾ ಆಯೋಗದ (ECI) 75ನೇ ವರ್ಷದ ಮಹೋತ್ಸವವನ್ನು ಗುರುತಿಸಿತು ಮತ್ತು 2024ರ ಯಶಸ್ವಿ ಲೋಕಸಭಾ ಚುನಾವಣೆಗಳನ್ನು ಸ್ಮರಿಸಿತು.
ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಆರ್., ತುಮಕೂರು ಜಿಲ್ಲಾ ಚುನಾವಣಾ ಸಾಹಿತ್ಯ ಸಮಿತಿಯ (ELC) ಸಂಚಾಲಕರು ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಮತದಾನದ ಮಹತ್ವವನ್ನು ವಿವರಣೆ ಮಾಡಿದರೆ, 21.7 ಕೋಟಿ ಯುವ ಮತದಾರರು ಸೇರಿದಂತೆ 99.1 ಕೋಟಿ ನೋಂದಾಯಿತ ಮತದಾರರು ಭಾರತದಲ್ಲಿ ಗಣನೆಗೆ ಬಂದಿರುವುದು ಹೈಲೈಟ್ ಮಾಡಿದರು. ಇದೇ ವೇಳೆ ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ರವರು ಅಧ್ಯಕ್ಷತೆ ವಹಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮತದಾರನ ಪಾತ್ರದ ಬಗ್ಗೆ ಗಮನಾರ್ಹ ಅಂಶಗಳನ್ನು ಚರ್ಚಿಸಿದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಹೇಗೆ ಜಾಗೃತ ಮತದಾರರ ಮೇಲೆ ಅವಲಂಬಿತವಾಗಿದೆ ಎಂಬ ಸಂದೇಶವನ್ನು ಗ್ರಹಿಸಿದರು.
ಈ ಆಚರಣೆಯು ಪ್ರಜಾಸತ್ತಾತ್ಮಕ ಜಾಗೃತಿಯನ್ನು ಹೆಚ್ಚಿಸುವುದು, ಹೊಸ ಮತದಾರರನ್ನು ಗೌರವಿಸುವುದು ಮತ್ತು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಪ್ರೇರಣೆ ನೀಡಲು ಮಾರ್ಗದರ್ಶಕವಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4