ತುಮಕೂರು: ತುಮಕೂರಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಿದ್ದೇವೆ. ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ರಾಜ್ಯದಲ್ಲಿ ಪ್ರತಿಷ್ಟಿತವಾದ ಜಿಲ್ಲೆ. ವಿಸ್ತೀರ್ಣದಲ್ಲಿ ತುಮಕೂರು ಮೂರನೇ ಸ್ಥಾನ ಪಡೆದುಕೊಂಡಿದೆ. 11 ವಿಧಾನಸಭಾ ಕ್ಷೇತ್ರಗಳು ತುಮಕೂರಿಗೆ ಬರುತ್ತೆ. 3 ಕ್ಷೇತ್ರಗಳಲ್ಲಿ ಸಂಸತ್ತು ಪ್ರಾತಿನಿಧ್ಯ ಪಡೆದುಕೊಂಡಿದೆ. ಬೆಂಗಳೂರಿಗೆ ಹತ್ತಿರವಿರುವ ವೇಗವಾಗಿ ಬೆಳೆಯುವ ಪಟ್ಟಣ ತುಮಕೂರು. ಮುಂದಿನ 10 ವರ್ಷದಲ್ಲಿ ಬೆಂಗಳೂರು ತುಮಕೂರಿಗೆ ಯಾವುದೇ ವ್ಯತ್ಯಾಸವಿರೋಲ್ಲ ಎಂದರು.
ನಾವು ಸರ್ಕಾರಲದಲ್ಲಿ ಆ ಕೆಲಸ ಮಾಡ್ತಾ ಇದ್ದೇವೆ. ಬೇರೆ ಬೇರೆ ದೇಶಗಳಲ್ಲಿ 100 ಕಿಮೀ ಅಂತರದ ಪರಿಮಿತಿ ಇಟ್ಟುಕೊಂಡಿದ್ದಾವೆ. ವಿಮಾನ ನಿಲ್ದಾಣಗಳು 70 ಕಿಮೀ ಅಂತರದಲ್ಲಿ ಪರಿಮಿತಿ ಇರುತ್ತೆ. ತುಮಕೂರು ಸಹ ಬೆಂಗಳೂರಿಗೆ ಹೊಂದುಕೊಂಡಂತೆ ಬೆಳವಣೆಗೆ ಆಗುತ್ತೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡ್ತಾ ಇದೆ. ಈಗಾಗಲೇ ನಾನು ಮನವಿ ಮಾಡಿದ್ದೇನೆ ವಿಮಾನ ನಿಲ್ದಾಣವನ್ನ ತುಮಕೂರಿನ ಆಸುಪಾಸಿನಲ್ಲಿ ಮಂಜೂರು ಮಾಡಲು ಕೇಳಿದ್ದೇನೆ. ಎರಡು ಭಾಗದಲ್ಲಿ ಜಾಗ ಗುರುತಿಸಿದ್ದಾರೆ. ವಸಂತನರಸಾಪುರ ಹೊಂದಿಕೊಂಡತೆ ಸುಮಾರು 3 ಸಾವಿರ ಎಕರೆ ಭೂಮಿ ನಕ್ಷೆ ಮಾಡಿದ್ದಾರೆ ಎಂದರು.
ಸೀಬಿ ದೇವಸ್ಥಾನ ಮಧುಗಿರಿ, ಕೊರಟಗೆರೆ ವರೆಗೆ 4 ಸಾವಿರ ಎಕರೆ ಭೂಮಿ. ಎರಡು ಪ್ರಸ್ತಾವಣೆ ಸರ್ಕಾರಕ್ಕೆ ಹೋಗಿದೆ, ನಾವು ಪಕ್ಷಾತೀತವಾಗಿ ಒತ್ತಾಯ ಮಾಡ್ತೀವಿ ಎಂದರು.
ತುಮಕೂರು ಮಹಾನಗರ ಪಾಲಿಕೆಗೆ 200 ಕೋಟಿ ಗ್ರಾಂಟ್ ನೀಡಿದ್ದಾರೆ. ಐದು ವಾಡ್೯ ಬಿಟ್ಟು 135 ಕೋಟಿ 202 ರಸ್ತೆ ಕಾಮಗಾರಿ ಕೈಗೆತ್ತುಕೊಳ್ತಾ ಇದ್ದೇವೆ. ಸುಮಾರು ಐದು ಕಡೆ ಮಾಂಸದ ಮಾರುಕಟ್ಟೆ ತೆರೆಯಲಾಗುವುದು. ವಧಾಗಾರ ಸುಮಾರು ಎರಡು ಕಡೆ ಮಾಡೋದಕ್ಕೆ ತಿಳಿಸಿದ್ದೇವೆ. ಹಾದಿ ಬೀದಿಯಲ್ಲಿ ಮಾಂಸ ಮಾರಾಟ ಮಾಡ್ತಾ ಇದ್ದಾರೆ ಹೈಜೆನಿಕ್ ಇರೋದಿಲ್ಲ. ಸಸ್ಯಹಾರಿಗಳಿಗೆ ಮುಜುಗರ ಆಗುತ್ತೆ ಅವರಿಗೆ ಅನುಕೂಲ ಆಗಲಿ ಅಂತಾ ಹೀಗೆ ಮಾಡಿದೆ ಎಂದು ತಿಳಿಸಿದರು.
ಈಗಾಗಲೇ ನೀಲಿ ನಕ್ಷೆ ತಯಾರಿಸಲಾಗಿದೆ ಅಮಾನಿಕೆರೆಯಲ್ಲಿ ಗ್ಲಾಸ್ ಬ್ರೀಡ್ಜ್ ಮಾಡಿ ಹೈಲೆಂಡ್ ಗಳಿಗೆ ಕನೆಕ್ಟ್ ಮಾಡಲಾಗುವುದು. ಪ್ರವಾಸೋದ್ಯಮ ಬೆಳವಣಿಗೆಗೆ ಅದನ್ನ ಅಂದಾಜು ಮಾಡಲಾಗಿದೆ. ಪಕ್ಷಿಗಳ ಪಾರ್ಕ್ ಮಾಡಲು ನಿರ್ಧಾರ ಮಾಡಲಾಗಿದೆ. ಟೌನ್ ಹಾಲ್ ಸರ್ಕಲ್ ನಲ್ಲಿ ಹೆಚ್ ಎಎಲ್ ನ ಮಾಡೆಲ್ ಹೆಲಿಕಾಪ್ಟರ್ ಇಡಲಾಗುವುದು ಎಂದರು.
ಅಂಬೇಡ್ಕರ್ ಪುತ್ಥಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಅಂಬೇಡ್ಕರ್ ಅವರ ಪುತ್ಥಳಿ ಇಡಲು ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಸರ್ಕಾರ ಕೊಟ್ಟ ಬಳಿಕ ಇಡಲಾಗುತ್ತೆ. ಸುಮಾರು 36 ಲಕ್ಷ ಸಿದ್ಧಾರ್ಥ ಸಂಸ್ಥೆ ಕೊಡುಗೆಯಾಗಿ ಕೊಡುತ್ತೆ. ಸರ್ಕಾರಿ ಮೆಡಿಕಲ್ ಕಾಲೇಜು ವಿಚಾರ. ಯಾವ ಜಿಲ್ಲೆಗಳಲ್ಲಿ ಸರ್ಕಾರಿ ಕಾಲೇಜುಗಳಿಲ್ಲ ಅಲ್ಲಿ ಕೊಡಲಾಗುವುದು. ಈಗಾಗಲೇ ಈ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಸುಮಾರು ೨ .5 ಲಕ್ಷ ಉದ್ಯೋಗ ಖಾಲಿ ಇದೆ. ಹಂತ ಹಂತವಾಗಿ ಕೆಲಸ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರದ ಬಜೆಟ್ ಭದ್ರ ಮೇಲ್ದಂಡೆಗೆ ನೀಡಲಾಗಿದ್ದ ಹಣ ಕೊಡಬೇಕು ಮತ್ತು ಜಿಎಸ್ ಟಿಯಲ್ಲಿ ನಮ್ಮ ಪಾಲನ್ನ ನಮಗೆ ಕೊಡಬೇಕು. ಅವರು ಏನೋ ಪಾಮುಲ್ ಇಟ್ಟುಕೊಂಡಿದ್ದಾರೆ ಅದರ ಮೂಲಕ ಕೊಡ್ತರೆ. ಖಾಸಗಿ ಬಸ್ ನಿಲ್ದಾಣವನ್ನ 6 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತೆ. ಗುಬ್ಬಿ ವೀರಣ್ಣ 6 ಕೋಟಿಯಲ್ಲಿ ಮರು ನಿರ್ಮಾಣವಾಗುತ್ತೆ ಎಂದು ತಿಳಿಸಿದರು.
ತುಮುಲ್ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಾನೂನಿನಲ್ಲಿ ಅವಕಾಶ ಇದೆ. ನಾಮಿನೇಷನ್ ಮಾಡಿ ಅಧ್ಯಕ್ಷ ಮಾಡೋ ಅವಕಾಶ ಇದೆ. ಒಂಬತ್ತು ಜನ ಅವರು ಕುಳಿತು ಅಧ್ಯಕ್ಷ ಮಾಡಿದ್ದಾರೆ ಎಂದರು.
ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಎಕ್ಸಪ್ಲೈನ್ ಮಾಡಲಿ ಆಮೇಲೆ ನಾನು ಹೇಳ್ತೀನಿ. ನಾಮನಿರ್ದೇಶನ ಮಾಡಿದೋರಿಗೆ ಅಧ್ಯಕ್ಷ ನೀಡೋ ಅವಕಾಶ ಇದೆ ಮಾಡಿದ್ದೇವೆ ಎಂದರು.
ಮೈಕ್ರೋ ಫೈನಾನ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ನಾವು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಇರುವ ಕಾನೂನನ್ನ ಭದ್ರ ಮಾಡುವಂತದ್ದು. ಮತ್ತೊಂದು ರಿಕವರಿ ಮಾಡುವವರು ಸಂಜೆ ಮೇಲೆ ದಾಳಿ ಮಾಡೋದು, ಅಂತೆಲ್ಲಾ ಕೆಲ ವಿಚಾರ ಇದೆ ಅದನ್ನ ಸ್ಟ್ರೀಟ್ ಆಗಿ ಮಾಡಬೇಕು ಅಂತಾ ಇದೆ, ಪೊಲೀಸರಿಗೆ ಎಕ್ಟ್ರಾ ಪವರ್ ಕೊಡೋಕೆ ರೆಡಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಈ ಕಾನೂನನ್ನ ತರಬೇಕು ಅಂತಾ ಒತ್ತಾಯ ಮಾಡ್ತೇವೆ. ಮುಖ್ಯಮಂತ್ರಿಗಳು ಸಹ ಪ್ರಧಾನಿಗಳಿಗೆ ಪತ್ರ ಬರೆಯುತ್ತೀನಿ ಅಂದಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx