ತುಮಕೂರು: ದೇಶದ 50 ನಗರಗಳ ಐಪಿಎಲ್ ಕ್ರಿಕೆಟ್ ಅಭಿಮಾನಿಗಳನ್ನು ಒಂದೆಡೆ ಸೇರಿಸುವ ಫ್ಯಾನ್ ಪಾರ್ಕ್ ಗಳ ಪೈಕಿ ತುಮಕೂರು ಕೂಡ ಒಂದಾಗಿದ್ದು ಮೇ 24 ಮತ್ತು 26ರಂದು ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿಶೇಷವಾದ ದೊಡ್ಡ ಪರದೆಗಳಲ್ಲಿ ನೇರಪ್ರಸಾರದ ಸ್ಟೇಡಿಯಂ ಅನುಭವವನ್ನು ನೀಡಲು ಐಪಿಎಲ್ ಮುಂದಾಗಿದೆ.
ಇದರ ಪ್ರವೇಶ ಉಚಿತವಾಗಿದ್ದು ಸಂಗೀತ ಮರ್ಚೆ ಆಹಾರ ಮಳಿಗೆಗಳು ಪಾನೀಯ ಐಪಿಎಲ್ ಅಧಿಕೃತ ಪ್ರಯೋಜಕತ್ವಗಳಿಂದ ಮೋಜು ಮತ್ತು ಉತ್ಸುಕತೆಯು ದುಪ್ಪಟ್ಟಾಗಲಿದೆ ಎನ್ನುತ್ತಾರೆ ಸಿಬ್ಬಂದಿ ಆನಂದ ದತ್ತ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ಸೀಸಂ ಕೂಡ ಹಿಂದಿಗಿಂತ ದೊಡ್ಡದಾಗಿರುತ್ತದೆ. ಈ ಬಾರಿ ಫ್ಯಾನ್ ಪಾರ್ಕ್ ಗಳಲ್ಲಿ ಕ್ರೇಜಿ ಮೋಜಿನ ಅನುಭವವನ್ನು 10 ಲಕ್ಷಕ್ಕೂ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಪಡೆಯಲಿದ್ದಾರೆ” ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296