ತುಮಕೂರು: 2024–25 ನೇ ಶೈಕ್ಷಣಿಕ ಸಾಲಿಗೆತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ಅಕ್ಟೋಬರ್ 5 ರವರೆಗೆ ವಿಸ್ತರಿಸಲಾಗಿದೆ.
ಯು.ಯು.ಸಿ.ಎಂ.ಎಸ್. ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಮುದ್ರಿತ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ವಿಭಾಗಗಳಿಗೆ ಅ.5ರಂದು ಸಂಜೆ 5ರ ಒಳಗಾಗಿ ತಲುಪಿಸಬೇಕಿದೆ. ಅ.8ರಂದು ಅಂತಿಮಮೆರಿಟ್ ಲಿಸ್ಟ್ ಪ್ರಕಟಿಸಲಾಗುವುದು.
ಅ.9 ರಂದುತುಮಕೂರು ವಿವಿಯಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿಎಂ.ಕಾಂ.ಕೋರ್ಸ್ ಗಳ ಕೌನ್ಸಿಲಿಂಗ್ ನಡೆಯಲಿದೆ. ಅ.10 ರಂದು ಡಾ.ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿಎಂ.ಎ. ಮತ್ತು ಎಂ.ಎಸ್.ಡಬ್ಲ್ಯೂ ಕೋರ್ಸ್ ಗಳ ಕೌನ್ಸಿಲಿಂಗ್ ಹಾಗೂ ವಿವಿಯ ಬಿದರಕಟ್ಟೆಯಲ್ಲಿರು ವಿಜ್ಞಾನಸಿರಿ ಕ್ಯಾಂಪಸ್ ನಲ್ಲಿಎಂ.ಎಸ್ಸಿ. ಕೋರ್ಸ್ ಗಳ ಕೌನ್ಸಿಲಿಂಗ್ ನಡೆಯಲಿವೆ. ಅ.14ರಿಂದ ತರಗತಿಗಳು ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿತುಮಕೂರು ವಿಶ್ವವಿದ್ಯಾನಿಲಯದಜಾಲತಾಣ http://tumkuruniversity.ac.in/ ಭೇಟಿ ನೀಡಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296