nammatumakuru

    Subscribe to Updates

    Get the latest creative news from FooBar about art, design and business.

    What's Hot

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!

    October 5, 2026
    Facebook Twitter Instagram
    ಟ್ರೆಂಡಿಂಗ್
    • SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!
    • ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!
    • ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!
    • ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು
    • ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ
    • AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?
    • ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?
    • ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜನವರಿ 28ರಂದು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ
    ತುಮಕೂರು January 27, 2025

    ಜನವರಿ 28ರಂದು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ

    By adminJanuary 27, 2025No Comments2 Mins Read
    gubbi veeranna

    ತುಮಕೂರು: ಲೋಕಚರಿತ ರಂಗಕೇಂದ್ರ (ರಿ) ಚಿಕ್ಕದಾಳವಟ್ಟ ಮತ್ತು ಸಮ್ಮತ ಥೀಯೇಟರ್ (ರಿ) ಆಯೋಜಿಸುವ ನಾಟಕ ‘ತಿಂಡಿಗೆ ಬಂದ ತುಂಡೇರಾಯ ‘ ಜನವರಿ 28ರಂದು ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ  6 ಗಂಟೆಗೆ ನಡೆಯಲಿದೆ.

    ಬರ್ಟೋಲ್ಟ್ ಬ್ರೆಕ್ಟ್ ರಚನೆಯ ಈ ನಾಟಕವನ್ನು ಶಕೀಲ್ ಅಹಮ್ಮದ್ ನಿರ್ದೇಶಿಸಿದ್ದಾರೆ. ಅನುಷ್ ಶೆಟ್ಟಿ, ಮುನ್ನ ಮೈಸೂರು ಸಂಗೀತ ನೀಡಿದ್ದಾರೆ. ರಂಗ ವಿನ್ಯಾಸ / ವಸ್ತ್ರ ವಿನ್ಯಾಸವನ್ನು ಶ್ವೇತಾ ರಾಣಿ ಎಚ್. ಕೆ. ಮಾಡಲಿದ್ದಾರೆ.

    ಶಕೀಲ್ ಅಹ್ಮದ್ : ಲೋಣಿ ಬಿ.ಕೆ. (ಬಿಜಾಪೂರ) ಊರಿನವರಾದ ಶಕೀಲ್ ಅಹ್ಮದ್, ಸಾಂಪ್ರದಾಯಿಕ ಮತ್ತು ಸಮಕಾಲೀನ ರಂಗಭೂಮಿಯ ತಂತ್ರಗಳನ್ನು ಬೆಸೆಯುವುದರ ಮೂಲಕ ತಮ್ಮದೇ ಆದ ರಂಗ ತರಬೇತಿಯನ್ನು ಸೃಷ್ಟಿಸಿದ್ದಾರೆ. ನೀನಾಸಂ ಹಾಗೂ ಸಿಂಗಾಪೂರಿನ ಇಂಟರ್ ಕಲ್ಟರ್ ಥಿಯೇಟರ್ ಇನ್ಸಿಟ್ಯೂಟ್ (ಐ.ಟಿ.ಐ) ನಲ್ಲಿ ಅಭಿನಯ ಕುರಿತು ತರಬೇತಿ ಪಡೆದಿರುತ್ತಾರೆ.

    “ಜನಮನದಾಟ” ತಂಡದಲ್ಲಿ ನಟರಾಗಿ, ಕರ್ನಾಟಕದ ಹಲವು ತಂಡಗಳಲ್ಲಿ ನಟ ಹಾಗೂ ತರಬೇತುದಾರರಾಗಿ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರ ನಿರ್ದೇಶನದ ನಾಟಕಗಳು-ಉಳಿದ ದೇಹಗಳು, ರೇಖೆಗಳು, ಮದುವೆ ಹೆಣ್ಣು, ಉಳಿದ ಸಾಕ್ಷಿಗಳು, ಅಪರಿಚಿತ ಘಳಿಗೆ, ಫಾರ್ ಎ ಬೈಟ್ ಆಫ್ ಫೂಡ್ ಹಾಗೂ ಆನಾಮಿಕನ ಸಾವು.

    ನಾಟಕದ ಕುರಿತು:

    ತಿಂಡಿಗೆ ಬಂದ ತುಂಡೇರಾಯ ಜರ್ಮನ್ ನಾಟಕಕಾರ ಬರ್ಟೋಲ್ಟ್‌ ಬ್ರೆಕ್ಟ್ ಅವರ “The resistible rise of Arthuro Ui” ನಾಟಕವನ್ನು ಆಧರಿಸಿದೆ. ಅದು ಎರಡನೇಯ ವಿಶ್ವಯುದ್ದಕ್ಕೂ ಮೊದಲು. ಜರ್ಮನಿಯಲ್ಲಿ. ಅಡಾಲ್ಫ್ ಹಿಟ್ಲ‌ರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಈ ನಾಟಕದ ಎಲ್ಲಾ ಪಾತ್ರಗಳು ಹಾಗೂ ಘಟನೆಗಳು, ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ.

    ಸಣ್ಣಪುಟ್ಟ ಕೊಲೆ, ಸುಲಿಗೆ, ದರೋಡೆ ಮಾಡಿಕೊಂಡು ಬದುಕಿದ್ದ ತುಂಡೇರಾಯನ ಹೆಸರು, ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ, ಜನರ ಮನಸ್ಸಿನಿಂದ ಮರೆಯಾಗಲಾರಂಬಿಸುತ್ತದೆ. ಸರ್ಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಬ್ರಷ್ಟ ರಾಜಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ, ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತದೆ. ಇದನ್ನೇ ಮೆಟ್ಟಿಲನ್ನಾಗಿಸಿಕೊಳ್ಳುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು, ದೊಂಬಿ-ಗಲಭೆಗಳನ್ನು ಸೃಷ್ಟಿಸುತ್ತಾ ತನ್ನ ಬುದ್ದಿ ಹಾಗೂ ಬಲಪ್ರಯೋಗದಿಂದ ಅಧಿಕಾರ ಗದ್ದುಗೆ ಹಿಡಿಯುತ್ತಾನೆ. ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗ ಇನ್ನೂ ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತದೆ. ಜನರನ್ನು ಮರುಳು ಮಾಡುತ್ತಾ, ಮರುಳಾಗದ್ದವರನ್ನು ಕೊಲ್ಲುತ್ತಾ, ಒಂದಾದ ಮೇಲೊಂದರಂತೆ ಎಲ್ಲಾ ರಾಜ್ಯಗಳನ್ನು ಕಬಳಿಸುತ್ತಾ, ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಾನೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತುಮಕೂರಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶ: ತಕ್ಷಣವೇ ನೇಮಕಾತಿ!

    October 5, 2026

    ತುಮಕೂರು ವಿವಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕರೆ

    October 3, 2026

    ತುಮಕೂರಿನಲ್ಲಿ 5 ಸಾವಿರ ಕೋಟಿ ಹೂಡಿಕೆಗೆ ರೆನೈಸ್ಸಾನ್ಸ್ ಆಸಕ್ತಿ: ಎಂ.ಬಿ.ಪಾಟೀಲ

    October 3, 2026

    Comments are closed.

    Our Picks

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರ ATM ಬಳಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬಂದಿವೆ.…

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!

    October 5, 2026

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.