nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ

    June 7, 2026

    ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ

    June 7, 2026

    ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ

    June 7, 2026
    Facebook Twitter Instagram
    ಟ್ರೆಂಡಿಂಗ್
    • ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ
    • ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ
    • ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ
    • ಉಚಿತ ಕಂಪ್ಯೂಟರ್ ತರಬೇತಿ ಪಡೆಯ ಬೇಕೆ?: ಅರ್ಜಿ ಸಲ್ಲಿಸಿ
    • ತುರುವೇಕೆರೆಯ ಮಲ್ಲಾಘಟ್ಟ ಕೆರೆ: 35 ಕೋಟಿ ರೂ.ವೆಚ್ಚದ ಕಾಮಗಾರಿ: ಸಿಎಂ ಡಿ.ಕೆ.ಶಿವಕುಮಾರ್
    • ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ
    • 6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!
    • ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉಡುಸಲಮ್ಮ ದೇವಿ ಜಾತ್ರೆ ಸಿಡಿ ಉತ್ಸವದ ಬಗ್ಗೆ ಜನ್ನ ಕವಿ ಏನು ಹೇಳಿದ್ದ?
    ಲೇಖನ April 18, 2022

    ಉಡುಸಲಮ್ಮ ದೇವಿ ಜಾತ್ರೆ ಸಿಡಿ ಉತ್ಸವದ ಬಗ್ಗೆ ಜನ್ನ ಕವಿ ಏನು ಹೇಳಿದ್ದ?

    By adminApril 18, 2022No Comments2 Mins Read
    udusalamma jathre
    •  ಡಾ.ವಡ್ಡಗೆರೆ ನಾಗರಾಜಯ್ಯ

    ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಉಡುಸಲಮ್ಮ ದೇವಿ ಜಾತ್ರೆಯಲ್ಲಿ ನಿನ್ನೆ ದಿನ (16-04-2022) ನಡೆದಿರುವ ಸಿಡಿ ಉತ್ಸವದ ವಿಡಿಯೋ ತುಣುಕು ಇದು.  ಇಂತಹ ಸಿಡಿ ಆಚರಣೆಯನ್ನು ಕುರಿತು ಜನ್ನ ಕವಿ ‘ಯಶೋಧರ ಚರಿತೆ’ ಕಾವ್ಯದಲ್ಲಿ ಹೀಗೆ ಹೇಳಿದ್ದಾನೆ :

     ಆ ದೇವಿಯ ಜಾತ್ರೆಗೆ ಮೊಳೆ|


    Provided by
    Provided by

    ವೋದೆಳವೆರೆ ಸಿರದ ಗಾಳಮುರಿಯುಯ್ಯಲೆ‌ ಕೈ||

    ವೋದಸುಕೆ ಕೋಕಿಲಧ್ವನಿ|

    ಮೂದಲೆಯುಲಿಯಾಗೆ ಬಂದನಂದು ವಸಂತಂ||

     

    ತಾಳುಗೆಯ ನುರ್ಚಿ ನೆತ್ತಿಯ

    ಗಾಳಂ ಗಗನದೊವಿಲ್ವ ವಾರಿಯ ಬೀರರ್|

    ಪಾಳಿಯೊಳೆಸೆದರ್ ಪಾಪದ

    ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ||

     ವಸಂತ ಮಾಸದಲ್ಲಿ ಬರುವ ಮಾರಿಜಾತ್ರೆಯ ಸಂದರ್ಭದಲ್ಲಿ ಚಂಡಮಾರಿ ದೇವತೆಗೆ ಅದೇ ದೇವಮಂದಿರದ ಆವರಣದಲ್ಲಿ ನಡೆಯುವ ಸಿಡಿ ಆಚರಣೆಯನ್ನು ಜನ್ನ ಕವಿ ವಿವರಿಸುತ್ತಾನೆ. ಬಾಲಚಂದ್ರನು ಸಿರದ ಗಾಳದಂತೆ (ಸಿಡಿ ಆಚರಣೆಯಲ್ಲಿ ಬಳಸುವ ಕಬ್ಬಿಣದ ಕೊಕ್ಕೆಯಂತೆ), ಚಿಗುರಿದ ಅಶೋಕ ವೃಕ್ಷವು ಉರಿಯ ಉಯ್ಯಾಲೆಯಂತೆ, ಕೋಕಿಲಧ್ವನಿಯು ಮೂದಲೆಯ ಉಲಿಯಂತೆ ತೋರುತ್ತಿರಲು ವಸಂತಮಾಸ ಆಗಮಿಸುತ್ತದೆ. ಇದೇ ವಸಂತ ಮಾಸದಲ್ಲಿ ನಡೆಯುವ ಮಾರಿ  ಜಾತ್ರೆಯ ಆಚರಣಾ ವಿಧಿಗಳಾದ ‘ಸಿರದ ಗಾಳ’, ‘ಉರಿಯ ಉಯ್ಯಲೆ’, ‘ಮೂದಲೆಯ ಉಲಿ’, ‘ನೆತ್ತಿಯ ಗಾಳ’ ಮುಂತಾದ ಜನಪದ ಚಟುವಟಿಕೆಗಳನ್ನು ಜನ್ನ ಕವಿ ನಿರುದ್ವಿಗ್ನವಾಗಿ ದಾಖಲಿಸಿರುತ್ತಾನೆ.  ಸಿರ ಎಂದರೆ ನಮ್ಮ ಕುತ್ತಿಗೆಯ ಹಿಂಬದಿಯ ಭಾಗ. ಇದನ್ನು ಸಿರಪಟ್ಟಿ, ಪಟ್ಟೆಸಿರ, ಎಕ್ಕತ್ತು, ಎಕ್ಸಿರ ಮುಂತಾದ ಪದಗಳಿಂದ ಕರೆಯುತ್ತೇವೆ. ದೇವಿ ಜಾತ್ರೆಯ ಭಾಗವಾಗಿ ನಡೆಯುವ ಸಿಡಿ ಉತ್ಸವದಲ್ಲಿ  ಸಿಡಿಗಂಬವನೇರಿ ಸಿಡಿ ಆಟ ಪ್ರದರ್ಶಿಸುವ ವ್ಯಕ್ತಿಯ ಕುತ್ತಿಗೆಯ ಹಿಂಬದಿಯಲ್ಲಿರುವ ಸ್ನಾಯುಗಳ ಮೇಲೆ ಮುಷ್ಟಿಯಿಂದ ಗುದ್ದಿ ನರಗಳನ್ನು ಸಡಿಲಿಸಲಾಗುತ್ತದೆ. ಸಡಿಲಿಸಿದ ಮುಖ್ಯ ನರಗಳಿಗೆ ಕಬ್ಬಿಣದ ಗಾಳವನ್ನು (ಸಿರಗಾಳ) ಸಿಕ್ಕಿಸಿ, ಅವನನ್ನು ಸಿಡಿಗಂಬಕ್ಕೇರಿಸಿ ಆಕಾಶದಲ್ಲಿ ತೂಗಾಡಿಸಲಾಗುತ್ತದೆ. ಸಿರದ ನರಗಳ ಬದಲು ನೆತ್ತಿಯ ನರಗಳಿಗೆ ಸಿಕ್ಕಿಸುವ ಕೊಕ್ಕೆಯನ್ನು ‘ನೆತ್ತಿಯ ಗಾಳ’ ಎಂದು ಕರೆಯುತ್ತಾರೆ.

    ಜನ್ನ ಕವಿ ತಾನು ಬದುಕಿದ್ದ ಕಾಲದಲ್ಲಿ ಸುದತ್ತನಪುರದ ಚಂಡಮಾರಿ ದೇವತೆಯ ಜಾತ್ರೆಯಲ್ಲಿ ನಡೆಯುವ ಸಿಡಿ ಆಚರಣೆಯ ಪ್ರತಿಯೊಂದು ವಿಧಿಗಳನ್ನು ಶ್ರದ್ಧೆಯಿಂದ ಗಮನಿಸಿ ತನ್ನ ಕಾವ್ಯದಲ್ಲಿ ದಾಖಲಿಸಿದ್ದಾನೆ. ಹಿಂಸೆಯ ಪರಿಕಲ್ಪನೆಯನ್ನು ವಿವರಿಸುವ ಮೂಲಕವೇ ಅಹಿಂಸೆ ಎಂಬ ಮೌಲ್ಯದ ಮಹತ್ವವನ್ನು ಓದುಗರಿಗೆ ಮನಗಾಣಿಸುತ್ತಾನೆ. ರಾಜಸತ್ತೆಯ ಅಂದಿನ ಕಾಲದಿಂದಲೂ ಪ್ರಜಾಸತ್ತೆಯ ಇಂದಿನ ಕಾಲದವರೆಗೂ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಇಂತಹ ರುದ್ರಭೀಷಣ ಆಚರಣೆಗಳಲ್ಲಿ ‘ಉತ್ತಮರು’ ಎನ್ನಿಸಿಕೊಂಡವರಿಗೆ ಮನರಂಜನೆ ನೀಡಲು ಪಾಲ್ಗೊಳ್ಳುತ್ತಿರುವ ‘ವಾರಿಯ ಬೀರರ್’ ಮಾತ್ರ ಕೆಳ ಜಾತಿಗಳ ಜನ. ಜನ್ನ ಕವಿ ಹೇಳುವ ‘ಉರಿಯ ಉಯ್ಯಲೆ’ ಎಂಬುದು ಕೊಂಡೋತ್ಸವ ಅಥವಾ ಅಗ್ನಿಗೊಂಡ ಆಚರಣೆಯಾಗಿರುತ್ತದೆ. ಕೊಂಡ ಹಾಯುವ ಆಚರಣದಯಲ್ಲಿ ಬೆಂಕಿಗೆ ಬಿದ್ದು ಸತ್ತ ‘ವಾರಿಯ ಬೀರರ್’  ಗಳಿಗೆ ಲೆಕ್ಕವಿಲ್ಲ. ಕೆಳಜಾತಿಗಳ ‘ವಾರಿಯ ಬೀರರ್’ ತೋರಿಸುವ ವೀರತ್ವದ ಬಾಳು ಎಂಥದ್ದೆಂದರೆ, ಜನ್ನನೇ ಹೇಳುವಂತೆ ‘ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ’. ಇಂತಹ ಆಚರಣೆಗಳನ್ನು ನಮ್ಮ ಬಾಬಾ ಸಾಹೇಬರು  ಕೊಟ್ಟಿರುವ ಸಂವಿಧಾನದ ಅಗ್ನಿಕುಂಡದಲ್ಲಿ ಸುಡುವುದೇ ಲೇಸು. ಏನಂತೀರಿ?


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    May 27, 2026

    ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?

    May 25, 2026

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    Leave A Reply Cancel Reply

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಸಿರಾ: ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನಕ್ಕೆ ಯುವ ಕಾಂಗ್ರೆಸ್ ಒತ್ತಾಯ

    June 7, 2026

    ಸಿರಾ: ಸಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರ ಅವರು ನುರಿತ ರಾಜಕೀಯ ಮುತ್ಸದ್ದಿಯಷ್ಟೇ ಅಲ್ಲದೆ ಕಳೆದ 50 ವರ್ಷಗಳ ರಾಜಕೀಯ…

    ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ

    June 7, 2026

    ಇತಿಹಾಸ ಪ್ರಸಿದ್ಧ ಬೋಡಬಂಡೇನಹಳ್ಳಿ ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಮುಖಂಡ ಅನಿಲ್ ಕುಮಾರ್ ಭೇಟಿ

    June 7, 2026

    ಉಚಿತ ಕಂಪ್ಯೂಟರ್ ತರಬೇತಿ ಪಡೆಯ ಬೇಕೆ?: ಅರ್ಜಿ ಸಲ್ಲಿಸಿ

    June 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.