ಹೆಚ್.ಡಿ.ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ಸೀರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾಧು ಅಧ್ಯಕ್ಷತೆಯನ್ನು ವಹಿಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯ ಕ್ರವನ್ನು ಉದ್ಘಾಟಿಸಿದರು.
ನಂತರ ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ, ಆರೋಗ್ಯ ಇಲಾಖೆಯ ಆಧಾರ ಸ್ತಂಭವೇ ಆಶಾ ಕಾರ್ಯಕರ್ತೆಯರು , ಹಾಗೂ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ಸಮವಸ್ತ್ರದ ಸೀರೆಯ ಬಣ್ಣ ತುಂಬಾ ಚೆನ್ನಾಗಿದೆ , ಪಿಂಕ್ ಬಣ್ಣದ ಸಮವಸ್ತ್ರ ಧರಿಸುವ ಆಶಾ ಕಾರ್ಯಕರ್ತೆಯರು ಎಷ್ಟೇ ಜನ ಇದ್ದರೂ ಸಹ ಆಶಾ ಕಾರ್ಯಕರ್ತರು ಎಂದು ಎದ್ದು ಕಾಣಿಸುತಾರೆ ಮತ್ತು ಅದರಲ್ಲಿ ಸಿಗುವ ಗೌರವ ಬೇರೆ ಎಲ್ಲೂ ಸಿಗದು, ಊರಿಂದ ಊರಿಗೆ ನಡೆದುಕೊಂಡು ಗ್ರಾಮದ ಮನೆ ಮನೆಗೂ ಹೋಗಿ ಬಾಣಂತಿ ಗರ್ಭಿಣಿಯರ, ಜನರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಹಾಗೂ ಮಕ್ಕಳ ಚುಚ್ಚುಮದ್ದಿನಲ್ಲೂ ಸಹ ಅವರ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ಆರೋಗ್ಯವೇ ಭಾಗ್ಯ , ಜನರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯವನ್ನು ಸಹ ನೋಡಿಕೊಳ್ಳಿ, ಹಾಗೂ ಕ್ಷೇತ್ರ ಮಟ್ಟದಲ್ಲಿ ಚೆನ್ನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದೀರಿ, ಇದೇ ರೀತಿ ಉತ್ತಮವಾದ ಸೇವೆಯನ್ನು ಜನರಿಗೆ ನೀಡಿ, ,ಹಾಗೂ ಆಶಾ ಕಾರ್ಯಕರ್ತರಿಗೆ ಗೌರವ ಧನ 5,000 ರೂಪಾಯಿಗಳನ್ನು ಅದರ ಜೊತೆಗೆ ನಮ್ಮ ಸರ್ಕಾರ 5,000ಗಳನ್ನು ನೀಡಿ ಒಟ್ಟು ಹತ್ತು ಸಾವಿರ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರುತ್ತಾರೆ, ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ 10,000 ರೂಪಾಯಿಗಳ ಗೌರವ ಧನವನ್ನು ನೀಡುತ್ತದೆ, ಈ ಕಳೆದ ವರ್ಷ ನಿಮಗೆ ಅಂದರೆ ಆಶಾ ಕಾರ್ಯಕರ್ತರಿಗೆ ಬ್ಯಾಗ್ ಮತ್ತು ಛತ್ರಿಯನ್ನು ವಿತರಿಸಿದ್ದೇನೆ, ಮುಂದಿನ ಮಾರ್ಚ್ 17ರಂದು ನಮ್ಮ ತಂದೆಯವರಾದ ಚಿಕ್ಕಮಾದು ರವರ ಹುಟ್ಟುಹಬ್ಬ ಇದೆ. ಆ ಸಮಯದಲ್ಲಿ ನಿಮಗೆ ಮತ್ತೊಂದು ಛತ್ರಿಯನ್ನು ನೀಡುತ್ತೇನೆ ಹಾಗೂ ನನ್ನ ಕ್ಷೇತ್ರದಲ್ಲಿನ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಶ್ರಮ ವಹಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ನಂತರ ಸಾಂಕೇತಿಕವಾಗಿ ಆಶಾ ಕಾರ್ಯಕರ್ತರಿಗೆ ಸಮವಸ್ತ್ರ ಸೀರೆ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಒಕ್ಕೂಟ ಸಂಘದ ನಿರ್ದೇಶಕರಾದ ಈರೇಗೌಡರು, ದಂಡಾಧಿಕಾರಿಗಳಾದ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ.ರವಿಕುಮಾರ್ ,, ಕ್ಯಾತನಹಳ್ಳಿನಾಗರಾಜು, ಜಿನ್ನಲ್ಲಿ ರಾಜನಾಯ್ಕ, ಶಂಭುಲಿಂಗ ನಾಯಕ, ಗಿರಿ ಗೌಡ್ರು, ಸೌಮ್ಯ, ಮಂಜುನಾಥ್, ಚಿಕ್ಕಣ್ಣ, ತಾಲೂಕು ಮಟ್ಟದ ಸಿಬ್ಬಂದಿ ವರ್ಗದವರಾದ ,ನಾಗೇಂದ್ರ, ರವಿರಾಜ್ ರೇಖಾ, ಪುಷ್ಪ,ಅರ್ಚನಾ, ರಾಜಕೀಯ ಮುಖಂಡರು,ಆಶಾ ಕಾರ್ಯಕರ್ತರು ಇನ್ನಿತರರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx