ಹಾಸನ: ತಾಳಿ ಕಟ್ಟುವ ವೇಳೆ ವಧು ಇಷ್ಟವಿಲ್ಲದ ಮದುವೆಯನ್ನು ನಿರಾಕರಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಮದುವೆ ನಿಶ್ಚಯವಾಗಿತ್ತು.
ಮುಹೂರ್ತದ ವೇಳೆ ವಧುವಿಗೆ ಕರೆ ಬಂದಿದೆ. ಕರೆ ಬಂದ ಬೆನ್ನಲ್ಲೇ ವಧು ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ. ತಕ್ಷಣವೇ ಮದುವೆ ಬೇಡ ಎಂದು ಪಲ್ಲವಿ ಕೊಠಡಿಗೆ ಹೋಗ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ.
ಆದರೆ ಯುವತಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ಆಕೆ ಮದುವೆಯನ್ನು ನಿರಾಕರಿಸಿದ್ದು, ಜೊತೆಗೆ ಇಷ್ಟವಿಲ್ಲದ ಮದುವೆ ಬೇಡ ಎಂದು ತೀರ್ಮಾನಿಸಿದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವರ ವೇಣುಗೋಪಾಲ ನನಗೂ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದು, ಹೀಗಾಗಿ ಮದುವೆ ಮುರಿದುಬಿದ್ದಿದೆ.
ಕಲ್ಯಾಣಮಂಟಪಕ್ಕೆ ವಧು–ವರನ ಕಡೆಯ ನೂರಾರು ಮಂದಿ ಆಗಮಿಸಿದ್ದರು. ಕಡೆ ಗಳಿಗೆಯಲ್ಲಿ ಮದುವೆ ನಿಂತು ಹೋಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW