ಇದೀಗ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸೀತಾ–ರಾಮ ಕಲ್ಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರುತ್ತಿದೆ. ಇನ್ನೇನು ಯಾವುದೇ ವಿಘ್ನ ಬಾರದಂತೆ ಸೀತಾ-ರಾಮ ಒಂದಾದರೆ ಸಾಕಪ್ಪ ಎನ್ನುವುದು ಅಭಿಮಾನಿಗಳ ಆಸೆ. ಇದರ ನಡುವೆಯೇ , ಸೀತಾ ಉಟ್ಟ ಸೀರೆಯ ಬಗ್ಗೆ ಚರ್ಚೆ ಸುರುವಾಗಿದೆ.
ಇಂಕ್ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಸೀರೆಯನ್ನು ಸೀತಾ ಉಟ್ಟಿದ್ದಳು. ಇದಕ್ಕೆ ಕಾಂಬಿನೇಶನ್ ಆಗಿ ಸ್ಯಾಂಡಲ್ ವುಡ್ ಕಲರ್ ಬ್ಲೌಸ್ ತೊಟ್ಟಿದ್ದಳು. ಇದನ್ನು ವೀಕ್ಷಕರು ಸ್ವಲ್ಪವೂ ಇಷ್ಟಪಟ್ಟಿರಲಿಲ್ಲ. ಥೂ ಮಿಸ್ ಮ್ಯಾಚ್, ಅಷ್ಟೂ ಗೊತ್ತಾಗಲ್ವಾ? ಡ್ರೆಸ್ ಸೆನ್ಸ್ ಇಲ್ವಾ?ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಎಂಬ ಕಾಮೆಂಟ್ ಗಳು ಬರುತ್ತಿವೆ.
ಸೀತಾ ಪಾತ್ರ ಮಾಡುತ್ತಿರುವ ವೈಷ್ಣವಿ ಗೌಡ ಅವರೂ ತಮ್ಮ ಸೀರೆಯ ಬಗ್ಗೆ ಬಂದಿರುವ ನೂರಾರು ಕಮೆಂಟ್ಗಳನ್ನು ಓದಿ ತಾವು ಉಟ್ಟ ಸೀರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಅಂದು ಉಟ್ಟುಕೊಂಡಿದ್ದ ಸೀರೆ-ಬ್ಲೌಸ್ ನೋಡಿ ವೀಕ್ಷಕರಿಗೆ ತುಂಬಾ ಬೇಸರವಾಗಿರುವ ಬಗ್ಗೆ ವೈಷ್ಣವಿ ಅವರು ಬೇಸರಿಸಿಕೊಂಡಿದ್ದಾರೆ.
ಸಾರಿ ನಿಮ್ಮ ರಾಶಿ ರಾಶಿ ಕಮೆಂಟ್ಗಳನ್ನು ನೋಡಿದೆ. ಅದು ಅರ್ಜೆಂಟ್ನಲ್ಲಿ ಆಗಿ ಹೋಯ್ತು. ನಾನೂ ಸರಿಯಾಗಿ ಗಮನಿಸಲಿಲ್ಲ. ನಿಮಗೆಲ್ಲಾ ಬೇಸರವಾಗಿದೆ ಎನ್ನುವುದು ಕಮೆಂಟ್ ನೋಡಿದರೆ ತಿಳಿಯುತ್ತದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಮುಂದೆಂದೂ ಹೀಗೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


