ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಗುಟ್ಕಾ, ಪಾನ್ ಮಸಾಲ ತಿಂದು ಉಗುಳುವವರಿಗೇನೂ ಕಡಿಮೆ ಇಲ್ಲ, ಅಂತಹ ಕೆಎಸ್ ಆರ್ ಟಿಸಿ ಬಸ್ ಗಳಲ್ಲೇ ಗುಟ್ಕಾ ಕಂಪೆನಿಗಳ ಜಾಹೀರಾತುಗಳನ್ನು ಪ್ರದರ್ಶನ ಮಾಡಲಾಗುತ್ತಿದೆಯೇ? ಇಲ್ಲೊಬ್ಬರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿರುವ ಫೋಟೋವೊಂದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಹೌದು…! ರಘು ತುಮಕೂರು ಎಂಬವರು ಕೆಎಸ್ ಆಟಿಸಿ ಬಸ್ ವೊಂದರ ಹಿಂಬದಿಯ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, “ಈ ಚಿತ್ರಣದಲ್ಲಿ ಏನೆಲ್ಲ ತಪ್ಪಿದೆ ಗುರುತಿಸುವೀರಾ?” ಎಂದು ಪ್ರಶ್ನೆ ಮಾಡಿದ್ದಾರೆ.
KA 06- F0783 ನಂಬರ್ ಪ್ಲೇಟ್ ನ ಈ ಬಸ್ ನಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ನಂಬರ್ ಪ್ಲೇಟ್ ಮೇಲೆಯೇ ವಿಮಲ್ ಜಾಹೀರಾತು ಅಂಟಿಸಲಾಗಿದೆ. ಈ ತಪ್ಪನ್ನು ಸಾಮಾಜಿಕ ಬಳಕೆದಾರರು ಗುರುತಿಸಿದ್ದಾರೆ. ಅಲ್ಲದೇ “ಕೆಎಸ್ ಆರ್ ಟಿ” ಮಾತ್ರವೇ ಇದ್ದು, ಸಿ ಅಕ್ಷರವನ್ನು ಬಿಟ್ಟಿರುವುದನ್ನೂ ಗುರುತಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಗಳ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪ್ರಸಿದ್ಧ ನಟರು ಗುಟ್ಕಾ ಕಂಪೆನಿಗೆ ಪ್ರಚಾರ ನೀಡುವಾಗ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ, ಸಾರ್ವಜನಿಕ ಸಂಸ್ಥೆ ಕೆಎಸ್ ಆರ್ ಟಿಸಿಯಲ್ಲೇ ಗುಟ್ಕಾ ಕಂಪೆನಿಗಳ ಜಾಹೀರಾತು ಪ್ರದರ್ಶನವಾಗುತ್ತಿದೆ. ಗುಟ್ಕಾ ತಿನ್ನುವವರು ಬಸ್ ನಿಲ್ದಾಣದಲ್ಲೇ ಉಗುಳಿದ್ರೆ, ಅದನ್ನು ಪ್ರಶ್ನಿಸುವ ನೈತಿಕತೆಯನ್ನು ಸಂಸ್ಥೆ ಹೇಗೆ ಉಳಿಸಿಕೊಳ್ಳುತ್ತದೆ ಎನ್ನುವ ಪ್ರಶ್ನೆಗಳೂ ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW