ಮಂಡ್ಯ: ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾದರೆ ಗೆಲುವು ನಿಶ್ಚಿತ. ಪ್ರೀತಿ, ವಿಶ್ವಾಸದಿಂದ ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ ಬಂದಿದೆ. ಬಿ.ಎಸ್.ಯಡಿಯೂರಪ್ಪ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು. ಕೆಆರ್ ಎಸ್ ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ. ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು. ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ ಎಂದರು.
ಅಸೆಂಬ್ಲಿಯಲ್ಲಿ ಜೆಡಿಎಸ್ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲುತ್ತಾರೆ. ಮಂಡ್ಯದವರು ಸ್ವಾಭಿಮಾನಿಗಳು. ಮಂಡ್ಯ, ಮೈಸೂರಿಗೆ ಅವಿನಾಭಾವ ಸಂಬಂಧ ಇದೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296