ಹೊಟ್ಟೆಯ ಸಮಸ್ಯೆಗಳನ್ನು ನಿಭಾಯಿಸಲು ಬೆಲ್ಲವು ತುಂಬಾ ಪ್ರಯೋಜನಕಾರಿಯಾಗಿದೆ. ಹೊಟ್ಟೆಯಲ್ಲಿ ಅನಿಲ ರಚನೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಲು ಬೆಲ್ಲ ಸಹಾಯ ಮಾಡುತ್ತದೆ. ಊಟದ ನಂತರ ಬೆಲ್ಲವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಬೆಲ್ಲದ ಜೊತೆ ಈರುಳ್ಳಿ ಸೇವಿಸುವುದರಿಂದ ಶೀತ, ಕಫ ನಿವಾರಿಸಲು ರಾಮಾಬಾಣವಾಗಿದೆ. ಸಕ್ಕರೆಯ ಬದಲು ಬೆಲ್ಲವನ್ನು ಹಾಲು ಅಥವಾ ಚಹಾದಲ್ಲಿ ಬಳಸಬಹುದು ಇದರಿಂದ ಆರೋಗ್ಯಕ್ಕೂ ಉತ್ತಮ.
ಬೆಲ್ಲವನ್ನು ಶುಂಠಿಯೊಂದಿಗೆ ಬಿಸಿ ಮಾಡಿ ತಿನ್ನುವುದರಿಂದ ಗಂಟಲು ನೋವಿನಿಂದ ಪರಿಹಾರ ದೊರೆಯುತ್ತದೆ. ಇದರೊಂದಿಗೆ, ಧ್ವನಿಯು ಉತ್ತಮಗೊಳ್ಳುತ್ತದೆ. ಕೀಲು ನೋವಿಗೆ ಬೆಲ್ಲವನ್ನು ಶುಂಠಿಯೊಂದಿಗೆ ಬಳಸುವುದು ತುಂಬಾ ಪ್ರಯೋಜನಕಾರಿಯಾಗಿದೆ.
ಬೆಲ್ಲವು ನಿಮ್ಮ ಚರ್ಮದ ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ. ಹೌದು, ಬೆಲ್ಲವು ರಕ್ತದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಪ್ರತಿದಿನ ಸ್ವಲ್ಪ ಬೆಲ್ಲವನ್ನು ತಿನ್ನುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮಕ್ಕೆ ಹೊಳಪು ಬರುತ್ತದೆ.