nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಜನಿಕಾಂತ್ ಜೊತೆ ಶಿವಣ್ಣನ ಮಾಸ್ ದರ್ಬಾರ್: ಬಿಡುಗಡೆಯಾಯ್ತು ‘ಜೈಲರ್ 2’ ಟ್ರೇಲರ್!

    October 6, 2026

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    ಬೆಂಗಳೂರು ಮೆಟ್ರೋ ಮತ್ತಷ್ಟು ವಿಸ್ತರಣೆ; ಬಿಡದಿ, ತುಮಕೂರು, ಹೊಸಕೋಟೆ ಸೇರಿ 6 ಹೊಸ ಮಾರ್ಗಗಳಿಗೆ ಸಿದ್ಧತೆ!

    October 6, 2026
    Facebook Twitter Instagram
    ಟ್ರೆಂಡಿಂಗ್
    • ರಜನಿಕಾಂತ್ ಜೊತೆ ಶಿವಣ್ಣನ ಮಾಸ್ ದರ್ಬಾರ್: ಬಿಡುಗಡೆಯಾಯ್ತು ‘ಜೈಲರ್ 2’ ಟ್ರೇಲರ್!
    • 35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!
    • ಬೆಂಗಳೂರು ಮೆಟ್ರೋ ಮತ್ತಷ್ಟು ವಿಸ್ತರಣೆ; ಬಿಡದಿ, ತುಮಕೂರು, ಹೊಸಕೋಟೆ ಸೇರಿ 6 ಹೊಸ ಮಾರ್ಗಗಳಿಗೆ ಸಿದ್ಧತೆ!
    • ಬರದಿಂದ 46,000 ಕೋಟಿ ರೂ. ನಷ್ಟ, ಜಿಎಸ್‌ ಟಿ ಸಂಗ್ರಹದ ಮೇಲೂ ಗಂಭೀರ ಪರಿಣಾಮ: ಡಿಸಿಎಂ ಡಾ. ಜಿ. ಪರಮೇಶ್ವರ್
    • ಮುಂಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ — ಜೆಡಿಎಸ್ ಮೈತ್ರಿಯಾಗಿ ಎದುರಿಸಲಿವೆ: ಬಿ.ಎಸ್.ಯಡಿಯೂರಪ್ಪ
    • SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!
    • ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!
    • ನೋಟಿನಲ್ಲಿರುವ ಗಾಂಧೀಜಿ ಚಿತ್ರ ನಿಜವಾದ ಫೋಟೋವೇ? ಈ ಹಳೆಯ ಚಿತ್ರದ ಹಿಂದಿದೆ ಕುತೂಹಲಕಾರಿ ಕಥೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ‘ಭೀಮ’ ಸಿನಿಮಾ ಬಗ್ಗೆ ಜನ ಹೇಳೋದೇನು ? ಕಲೆಕ್ಷನ್ ಎಷ್ಟು ?
    ರಾಜ್ಯ ಸುದ್ದಿ August 11, 2024

    ‘ಭೀಮ’ ಸಿನಿಮಾ ಬಗ್ಗೆ ಜನ ಹೇಳೋದೇನು ? ಕಲೆಕ್ಷನ್ ಎಷ್ಟು ?

    By adminAugust 11, 2024No Comments2 Mins Read
    bheema

    ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ನಿನ್ನೆ (ಆಗಸ್ಟ್ 09) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ದುನಿಯಾ ವಿಜಯ್‌ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಈ ಸಿನಿಮಾ ಪಡೆದುಕೊಂಡಿದೆ‌.

    ಪ್ರೇಕ್ಷಕರು ‘ಸಲಗ’ದೊಂದಿಗೆ ಹೋಲಿಸಿ ನೋಡುತ್ತಿದ್ದಾರೆ. ಪತ್ರಿಕೆಗಳಲ್ಲಿ ನೆಗೆಟಿವ್ ವಿಮರ್ಶೆಗಳು ಪ್ರಕಟವಾಗಿವೆ‌. ಇದರ ನಡುವೆಯೂ ಉತ್ತಮ ಮೊತ್ತವನ್ನೇ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆ ಹಾಕಿದೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸುಮಾರು 9 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಮೊದಲ‌ ದಿನ 9-10 ಕೋಟಿ ಗಳಿಕೆ ಮಾಡಿರುವುದು ‘ಭೀಮ’ ಪಾಲಿಗೆ ಬಹಳ‌ ಒಳ್ಳೆಯ ಮೊತ್ತವೇ ಆಗಿದೆ.

    ‘ಭೀಮ’ ಸಿನಿಮಾ, ಡ್ರಗ್ಸ್ ವಿರುದ್ಧ ನಿಲವು ತಳೆದ ಲೋಕಲ್‌ ರೌಡಿಯೊಬ್ಬನ ಕತೆ ಒಳಗೊಂಡಿದೆ. ಬೆಂಗಳೂರಿ‌ನಲ್ಲಿ ಗಾಂಜಾ ಹೇಗೆ ಪ್ರಸಾರ ಆಗುತ್ತಿದೆ, ಹೇಗೆ ಯುವಕರು ನಶೆಯ ಜಾಲದೊಳಕ್ಕೆ ಬೀಳುತ್ತಿದ್ದಾರೆ ಎಂಬುದನ್ನು ತೋರಿಸುವ‌ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿದ್ದಾರೆ. ಆದರೆ ಸಿನಿಮಾ ನೋಡಿದ ಮಂದಿ ‘ಸಲಗ’ ಸಿನಿಮಾದೊಂದಿಗೆ ಹೋಲಿಸುತ್ತಿದ್ದು, ‘ಸಲಗ’ದಷ್ಟು ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.

    ಶ್ರೀಮಂತ ಮತ್ತು ಬಡ ಯುವಕರು ಗಾಂಜಾ ಅಮಲಿಗೆ ಬಲಿಯಾಗುತ್ತಿರುವುದು, ಅದನ್ನು ತಡೆಗಟ್ಟಲು ನಾಯಕನ ಹೋರಾಟ. ನಾಯಕನ ಈ ಹೋರಾಟದಲ್ಲಿ ರಕ್ತಪಾತ ಯಥೇಚ್ಚವಾಗಿದೆ, ಕೆಲವೊಮ್ಮೆ ಚಿತ್ರ ಪರದೆಯ ಮೇಲೆ ರಕ್ತ ಚಿಮ್ಮುವಂತೆ ಭಾಸವಾಗುತ್ತದೆ. ಇನ್ನೂ ಅವ್ಯಾಚ್ಯ ಶಬ್ದಗಳ ಬಳಕೆಯಂತೂ ನಿರರ್ಗಳವಾಗಿದೆ. ಎಲ್ಲಾ ಪಾತ್ರಗಳು ಅದನ್ನೂ ಮ್ಯಾಂಡೇಟ್ ಎನ್ನುವಂತೆ ಸಿನಿಮಾದಲ್ಲಿ  ಬೈಗುಳಗಳನ್ನು ಬಳಸಿದ್ದು ಕೇಳುವವರಿಗೆ ಕರ್ಣ ಕಠೋರವಾಗಿದೆ.

    ಇನ್ನು ಕೆಲವೆಡೆ ಅನಗತ್ಯ ಹೊಡೆದಾಟ ಬಡಿದಾಟದ ದೃಶ್ಯಗಳಿವೆ, ಪೈಟಿಂಗ್ ಸೀನ್ ನಲ್ಲಿ ಶಾಲೆ– ಕಾಲೇಜು ಯುವಕರು ಕತ್ತಿ ಹಿಡಿವ ದೃಶ್ಯ ನೋಡುವಾಗ ಸಿನಿಮಾದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ ಎನ್ನಿಸುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಕೆಲವು ನೈಜ ಘಟನೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ, ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ಈ ಪ್ರವೃತ್ತಿಗಳ ಬಗ್ಗೆ ಯೋಚನೆ ಮಾಡುವಂತಾಗುತ್ತದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಬೆಂಗಳೂರು ಮೆಟ್ರೋ ಮತ್ತಷ್ಟು ವಿಸ್ತರಣೆ; ಬಿಡದಿ, ತುಮಕೂರು, ಹೊಸಕೋಟೆ ಸೇರಿ 6 ಹೊಸ ಮಾರ್ಗಗಳಿಗೆ ಸಿದ್ಧತೆ!

    October 6, 2026

    ಬರದಿಂದ 46,000 ಕೋಟಿ ರೂ. ನಷ್ಟ, ಜಿಎಸ್‌ ಟಿ ಸಂಗ್ರಹದ ಮೇಲೂ ಗಂಭೀರ ಪರಿಣಾಮ: ಡಿಸಿಎಂ ಡಾ. ಜಿ. ಪರಮೇಶ್ವರ್

    October 5, 2026

    ಮುಂಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ — ಜೆಡಿಎಸ್ ಮೈತ್ರಿಯಾಗಿ ಎದುರಿಸಲಿವೆ: ಬಿ.ಎಸ್.ಯಡಿಯೂರಪ್ಪ

    October 5, 2026

    Comments are closed.

    Our Picks

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ರಜನಿಕಾಂತ್ ಜೊತೆ ಶಿವಣ್ಣನ ಮಾಸ್ ದರ್ಬಾರ್: ಬಿಡುಗಡೆಯಾಯ್ತು ‘ಜೈಲರ್ 2’ ಟ್ರೇಲರ್!

    October 6, 2026

    ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್ 2’ (Jailer 2) ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು,…

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    ಬೆಂಗಳೂರು ಮೆಟ್ರೋ ಮತ್ತಷ್ಟು ವಿಸ್ತರಣೆ; ಬಿಡದಿ, ತುಮಕೂರು, ಹೊಸಕೋಟೆ ಸೇರಿ 6 ಹೊಸ ಮಾರ್ಗಗಳಿಗೆ ಸಿದ್ಧತೆ!

    October 6, 2026

    ಬರದಿಂದ 46,000 ಕೋಟಿ ರೂ. ನಷ್ಟ, ಜಿಎಸ್‌ ಟಿ ಸಂಗ್ರಹದ ಮೇಲೂ ಗಂಭೀರ ಪರಿಣಾಮ: ಡಿಸಿಎಂ ಡಾ. ಜಿ. ಪರಮೇಶ್ವರ್

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.