ಶ್ರಾವಣ ಮಾಸ ಅಂದ್ರೆ ಮಳೆಯಾಗುವ ಸಮಯ. ತಂಪಾದ ಗಾಳಿ ಮತ್ತು ಮಳೆಯು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ವಾತಾವರಣ ಹೆಚ್ಚು ಆರ್ದ್ರತೆಯಿಂದ ಕೂಡಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಈ ವಾತಾವರಣದಲ್ಲಿ ಬೇಗ ಬೆಳೆಯುತ್ತವೆ. ಹೀಗಾಗಿ ಇದು ಸೋಂಕು, ಫುಡ್ ಪಾಯ್ಸನ್, ಅತಿಸಾರ ಮತ್ತು ಅಜೀರ್ಣದಂತಹ ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಆರ್ದ್ರತೆಯು ಜೀರ್ಣಕ್ರಿಯೆಯ (Digestion) ಮೇಲೆ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರಿ ಆಹಾರಗಳು ಮತ್ತು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ.
ಹಿಂದೂ ಸಂಪ್ರದಾಯದ (Hindu religion) ಪ್ರಕಾರ, ಪ್ರಾಣಿಗಳ ಸಂತಾನವೃದ್ಧಿ ಕಾಲದಲ್ಲಿ ಅವುಗಳನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಮಾನ್ಸೂನ್ ಅನೇಕ ಪ್ರಾಣಿಗಳಿಗೆ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ, ಈ ಅವಧಿಯಲ್ಲಿ ಮಾಂಸಾಹಾರಿ ಮತ್ತು ಮೊಟ್ಟೆಗಳನ್ನು ತಪ್ಪಿಸಲು ಸೂಚಿಸಲಾಗುತ್ತದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಜೀರ್ಣವಾಗಿ ಮಾಂಸಾಹಾರವು ಕರುಳಿನ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಅನ್ನೋ ದೃಷ್ಟಿಯಿಂದ ಮಾಂಸಾಹಾರ ತಿನ್ನಬಾರದು ಎನ್ನುತ್ತಾರೆ. ಮಳೆಗಾಲದಲ್ಲಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಸೂರ್ಯನ ಬೆಳಕಿನ ಕೊರತೆ ಇರುತ್ತದೆ. ತೇವಾಂಶ ಹೆಚ್ಚಿರುತ್ತದೆ. ಹೀಗಾಗಿ ಮಾಂಸಾಹಾರ ಬೇಗ ಕೆಡಬಹುದು ಅನ್ನೋದು ಸಹ ಒಂದು ಕಾರಣ.
ಮಳೆಗಾಲದಲ್ಲಿ ಕೋಳಿ, ಕುರಿ ಮೊದಲಾದವುಗಳು ಹಲವಾರು ರೀತಿಯ ಕೀಟಗಳನ್ನು ಸಹ ಸೇವಿಸುತ್ತವೆ. ಇದರಿಂದಾಗಿ ಅವು ಅನಾರೋಗ್ಯಕ್ಕೆ ಒಳಗಾಗುತ್ತವೆ ಮತ್ತು ಮಾಂಸಾಹಾರವನ್ನು ಸೇವಿಸುವುದರಿಂದ ಸೋಂಕು ಮನುಷ್ಯರನ್ನು ತಲುಪುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296