ಚಿಕ್ಕಮಗಳೂರು: ಕಾಡಾನೆಯನ್ನು ಕಾರ್ಮಿಕರು ಪ್ರಾಣ ಭಯದಿಂದ ಮಕ್ಕಳನ್ನು ಎತ್ತಿಕೊಂಡು ಓಡಿದ ಘಟನೆ ಮೂಡಿಗೆರೆ–ಬೇಲೂರು ಗಡಿ ಮಲಸಾವರ ಬಳಿಯ ಬಕ್ರವಳ್ಳಿಯಲ್ಲಿ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕರತ್ತ ಒಂಟಿ ಸಲಗ ನುಗ್ಗಿದೆ. ಕಾರ್ಮಿಕರ ಜೊತೆಗೆ ಪುಟ್ಟ ಮಕ್ಕಳು ಕೂಡ ಇದ್ದರು. ಈ ವೇಳೆ ಏನು ಮಾಡಬೇಕು ಎಂದು ತೋಚದೇ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ಓಡಿದ್ದಾರೆ.
ಕಾಫಿತೋಟದ ಕಾರ್ಮಿಕರತ್ತ ಕಾಡಾನೆ ನುಗ್ಗಿದ್ದು, ಕಾರ್ಮಿಕರು ಓಡಿದಂತೆ ಹಿಂದೆಯೇ ಒಂಟಿ ಸಲಗ ಅಟ್ಟಾಡಿಸಿಕೊಂಡು ಬಂದಿದೆ. ಸ್ವಲ್ಪದರಲ್ಲೇ ಕಾರ್ಮಿಕರು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4