ಪಾವಗಡ: ಈ ಬಾಲಕನ ಹೆಸರು ಅಯಾನ್. ಕಳೆದ ಎರಡು ತಿಂಗಳ ಹಿಂದೆ ಜ್ವರ ಬರುತ್ತಿದೆ ಎಂದು ಮನೆಯವರಿಗೆ ಗೊತ್ತಿಲ್ಲದೆ ನಾಲ್ಕೈದು ದಿನಗಳ ಕಾಲ ಡೈಕ್ಲೋ ಇಂಜೆಕ್ಷನ್ ಹಾಕಿಸಿಕೊಂಡಿದ್ದು, ಕಂಟಿನ್ಯೂಯಾಗಿ ಇಂಜೆಕ್ಷನ್ ಹಾಕಿಸಿಕೊಂಡಿರುವುದರಿಂದ ಈತನ ಒಂದು ಕಾಲು ಇನ್ಫೆಕ್ಷನ್ ಗೆ ತುತ್ತಾಗಿದೆ.
ಸದ್ಯ ಮೂರು ಬಾರಿ ಇತರ ಕಾಲಿಗೆ ಆಪರೇಷನ್ ಮಾಡಿಸಲಾಗಿದೆ, ಸೋಮವಾರ ಮತ್ತೊಮ್ಮೆ ಸರ್ಜರಿ ಮಾಡುವ ಅಗತ್ಯ ಇರುವುದರಿಂದ ಇದಕ್ಕೆ 2 ಲಕ್ಷಕ್ಕೂ ಅಧಿಕ ಹಣ ಬೇಕಾಗಿರುತ್ತದೆ. ಈತನ ತಂದೆ ಕಲೀಮ್ ಸಾಬ್ ಅವರು ಆಟೋ ಚಾಲನೆ ಮಾಡುತ್ತಾರೆ ತಾಯಿ ನಸ್ರಿನ್ ಅವರು ಮನೆಯಲ್ಲಿ ಹೂವಿನ ಹಾರಗಳನ್ನು ಹೊಲಿಯುತ್ತಾ ಜೀವನ ಸಾಗಿಸುತ್ತಾರೆ. ತಮ್ಮ ಬಳಿ ಇರುವಂತಹ ಹಣ ಮತ್ತು ನೆರೆಹೊರೆಯವರಿಂದ ಸಾಕಷ್ಟು ಸಾಲ ಮಾಡಿ ಇಲ್ಲಿಯವರೆಗೂ ಚಿಕಿತ್ಸೆ ಕೊಡಿಸಿದ್ದು ಸರ್ಜರಿಗೆ ಬೇಕಾದ ಹಣ ಹೊಂದಿಸಲು ಸಾಧ್ಯವಾಗಿದ ಪರಿಸ್ಥಿತಿಯಲ್ಲಿ ಇವರಿದ್ದಾರೆ.
ಈ ನಡುವೆ ಇವರ ಬಿಪಿಎಲ್ ಕಾರ್ಡ್ ನಲ್ಲಿ ಐಯಾನ್ ಹೆಸರನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಇವರು ಇದೀಗ ತಮ್ಮ ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಉದಾರ ದಾನಿಗಳ ನೆರವು ಕೇಳಿದ್ದಾರೆ. ಅಯಾನ್ ನ ಸರ್ಜರಿಗೆ ಸಾರ್ವಜನಿಕರು ತಮ್ಮಿದಾದಷ್ಟು ಸಹಾಯ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ನೆರವು ನೀಡಲು ಇಚ್ಛಿಸುವವರು ಅಯಾನ್ ಅವರ ತಾಯಿ ನಸ್ರೀನ್ ಅವರ ಫೋನ್ ಪೇ ನಂಬರ್ 9019987193 ಗೆ ನೆರವು ನೀಡಬಹುದಾಗಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q