ಥಾಣೆ: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ನಗರದ ವಿಶೇಷ ನ್ಯಾಯಾಲಯ 40 ವರ್ಷದ ಗೃಹಿಣಿಯೊಬ್ಬರಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಮೇ 30ರಂದು ನೀಡಿರುವ ಆದೇಶದಲ್ಲಿ, ವಿಶೇಷ ಪೋಕ್ಸೊ ಕಾಯ್ದೆಯ ನ್ಯಾಯಾಧೀಶ ಡಿಎಸ್ ಎ ದೇಶ್ ಮುಖ್ ಅವರು ಮುಂಬೈನ ಗೋರೆಗಾಂವ್ ಪ್ರದೇಶದ ನಿವಾಸಿಯಾದ ಅಪರಾಧಿಗೆ 14,000 ರೂ. ದಂಡವನ್ನು ವಿಧಿಸಿದ್ದಾರೆ.
ವಿಶೇಷ ಅಭಿಯೋಜಕಿ ರೇಖಾ ಹಿವ್ರಾಲೆ ಅವರ ಪ್ರಕಾರ, ವಿಚಾರಣೆಯ ಸಮಯದಲ್ಲಿ ಒಟ್ಟು ಏಳು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು.
ಮುಂಬೈ ನಿವಾಸಿಯಾದ ಮಹಿಳೆಯನ್ನು 2021ರ ಏಪ್ರಿಲ್ 5 ರಂದು ಥಾಣೆಯ ವ್ಯಾಗ್ಲೆ ಎಸ್ಟೇಟ್ ಪ್ರದೇಶದ ಪಾಸ್‌ಪೋರ್ಟ್ ಕಚೇರಿ ಬಳಿಯ ಹೋಟೆಲ್ ನಲ್ಲಿ ಇಬ್ಬರು ಬಾಲಕಿಯರೊಂದಿಗೆ ಇದ್ದ ವೇಳೆ ಬಂಧಿಸಲಾಯಿತು.
‘ಓರ್ವ ಅಪ್ರಾಪ್ತೆ–A’ ಮತ್ತು ಮಹಿಳೆಯ ಮಗಳು ಸ್ನೇಹಿತರಾಗಿದ್ದರು. ಬಡ ಕುಟುಂಬದಿಂದ ಬಂದ ಅಪ್ರಾಪ್ತೆಗೆ ವೇಶ್ಯಾವಾಟಿಕೆ ಮಾಡಿದರೆ ಉತ್ತಮ ಹಣ ಸಿಗುತ್ತದೆ ಎಂದು ಮಹಿಳೆ ಹೇಳಿದ್ದಾಳೆ. ನಂತರ, ಮಹಿಳೆ ಆಕೆಯನ್ನು ಗ್ರಾಹಕರ ಬಳಿಗೆ ಕಳುಹಿಸುತ್ತಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ನ್ಯಾಯಾಲಯದ ದಾಖಲೆಗಳಲ್ಲಿ ‘ಮೈನರ್ ಗರ್ಲ್–ಎಂ’ ಎಂದು ಗುರುತಿಸಲಾದ ಎರಡನೇ ಸಂತ್ರಸ್ತೆಯನ್ನು ಅದೇ ರೀತಿ ಬಳಸಿಕೊಳ್ಳಲಾಗಿದೆ ಎಂದು ದೃಢಪಡಿಸಿದ್ದಾಳೆ.
ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಧೀಶರು, ಆರೋಪಿಗೆ ಮೃದುತ್ವ ತೋರಿಸಲು ಇದು ಸೂಕ್ತ ಪ್ರಕರಣವಲ್ಲ ಎಂದಿದ್ದು, ಮಹಿಳೆಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW