ವಿಜಯಪುರ: ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ನಾಡದೇವಿಗೆ ಬೆಳ್ಳಿಯ ಕಿರೀಟ ಕೊಡಿಸಿದ್ದು, 250 ಗ್ರಾಮ್ ತೂಕದ ಬೆಳ್ಳಿಯ ಕಿರೀಟ ನಾಡದೇವಿಯ ಮುಡಿಯೇರಿದೆ.
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಹೂವಿನಹಳ್ಳಿಯ ಮಹಿಳೆ ಭಾಗಮ್ಮಕಳೆದ ಒಂದೂವರೆ ವರ್ಷದಿಂದ ಬಂದ ಭಾಗ್ಯಲಕ್ಷ್ಕೀ ಯೋಜನೆ ಹಣ ಕೂಡಿಟ್ಟು ನಾಡ ದೇವಿಗೆ ಬೆಳ್ಳಿಯ ಕಿರೀಟ ದಾನ ಮಾಡಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಗ್ಯಮ್ಮ ಅವರು ಸಿದ್ದರಾಮಯ್ಯ ಸರ್ಕಾರವನ್ನು ಕೊಂಡಾಡಿದರು. ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗುತ್ತಿದೆ ಎಂದರು.
ಇನ್ನು ಭಾಗಮ್ಮ ಬಿರಾದಾರ ಅವರು ಈ ಕಾರ್ಯಕ್ಕೆ ಸ್ಥಳೀಯ ಮುಖಂಡರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೇ ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಭಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಇತ್ತೀಚೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಕೂಡಿಟ್ಟು ಮಗನಿಗೆ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅದಲ್ಲದೆ ಅತ್ತೆಯೊಬ್ಬರು ಈ ಹಣದಿಂದ ತನ್ನ ಸೊಸೆಯ ಜೀವನಕ್ಕಾಗಿ ಫ್ಯಾನ್ಸಿ ಅಂಗಡಿಯನ್ನು ಮಾಡಿಸಿಕೊಟ್ಟಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q