ಮಹಿಳೆಯೊಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ ನ ತುರ್ತುನಿರ್ಗಮನ ಬಾಗಿಲ ಕಿಟಕಿಯಲ್ಲಿ ಉಗುಳಲು ಹೋಗಿ ತಲೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಿಟಕಿಯ ಮೂಲಕ ಉಗಳಲೆಂದು ತಲೆ ಹೊರಗೆ ಹಾಕಿದ್ದಾರೆ. ಆದರೆ ದುರಾದೃಷ್ಟವಶಾತ್ ಮಹಿಳೆಯ ತಲೆ ಅಲ್ಲಿಯೇ ಲಾಕ್ ಆಗಿದೆ. ಈ ವೇಳೆ ಮಹಿಳೆ ಸಾಕಷ್ಟು ಪರದಾಟ ಅನುಭವಿಸಿದ್ದಾರೆ.
ಕಿಟಕಿಯ ಸಣ್ಣ ಜಾಗ ಇದ್ದ ಕಾರಣ ಮತ್ತು ತುರ್ತು ನಿರ್ಗಮನದ ಬಾಗಿಲನ್ನು ಹೆಚ್ಚಾಗಿ ಬಳಸದ ಕಾರಣ ಅದರ ಕಿಟಕಿಯನ್ನು ಬೇಗನೆ ತೆಗೆಯಲಾಗಲಿಲ್ಲ. ಹೀಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿದೆ. ಈ ವೇಳೆ ಮಹಿಳೆಯ ಪರದಾಟ ಗಮನಿಸಿದ KSRTC ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ನಿಲ್ಲಿಸಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಲಾಗಿದೆ.
ಮಹಿಳೆಯ ತಲೆ ಲಾಕ್ ಆಗಿ ಪರದಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296