ಈ ಹಿಂದೆ ಹಲವು ಬಾರಿ ಸರ್ಕಾರಿ ಬಸ್ ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆಗಳು ವರದಿಯಾಗಿದ್ದವು. ಹಾಗೆಯೇ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೀಟಿಗಾಗಿ ಕೆಲವು ಮಹಿಳೆಯರು ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದು ಸೀಟಿಗಾಗಿ ಪರಸ್ಪರ ಚಪ್ಪಲಿ ಹಿಡಿದು ಬಡಿದಾಡಿಕೊಂಡು, ಅಂಗಿ- ರವಿಕೆ ಹರಿದುಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ. ಈ ಘಟನೆ ಬೀದರ್ ನಿಂದ ಕಲಬುರಗಿಗೆ ತೆರಳುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ತಾನು ಕರ್ಚೀಫ್ ಹಾಕಿಟ್ಟಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದರಿಂದ ಸಿಟ್ಟಾದ ಮಹಿಳೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಸ್ಪಂದಿಸದೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಮಾತಿಗೆ ಮಾತು ಬೆಳೆದಿದೆ.
ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ. ಪರಸ್ಪರರ ಅಂಗಿ ಹಿಡಿದು ಎಳೆದಾಡಿಕೊಂಡಿದ್ದಾರೆ. ನಂತರ ಚಪ್ಪಲಿ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜೊತೆಗಿದ್ದ ಹಲವರು ಇವರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಈ ಘಟನೆಯನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296