ತುಮಕೂರು : ತುಮಕೂರು ದಸರಾ 2024ರ ದಸರಾ ದೀಪಾಲಂಕಾರಕ್ಕಿಂದು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ತುಮಕೂರಿನ ರಾಜ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ನಾಗರಿಕರನ್ನು ಪುಳಕಗೊಳಿಸಿದೆ. ನಗರದ ಬಟವಾಡಿ ವೃತ್ತದಿಂದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ಚೌಟ್ರಿ ವೃತ್ತ, ಟೌನ್ ಹಾಲ್ ವೃತ್ತ, ಕಾಲ್ ಟ್ಯಾಕ್ಸ್ ವೃತ್ತ ಹಾಗೂ ಗುಬ್ಬಿ ವೃತ್ತದ ವರೆಗೂ ಮತ್ತು ಶಿರಾ ಗೇಟ್ ನಿಂದ ಮರಳೂರು ದಿಣ್ಣೆ ವೃತ್ತವರೆಗೂ ಅಲ್ಲದೆ ನಗರದ ಪ್ರಮುಖ ಬೀದಿಗಳು ದೀಪಾಲಂಕಾರದಿಂದ ಮಧುವಣಗಿತ್ತಿಯಂತೆ ಸಿದ್ದವಾಗಿವೆ.
ನಗರದ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಮೂಡಿದ ಚಾಮುಂಡಿ, ಕೃಷ್ಣ, ಲಕ್ಷ್ಮೀ ಸೇರಿದಂತೆ ವಿವಿಧ ದೇವರುಗಳ ಕಲಾಕೃತಿಗಳು ದೀಪಾಲಂಕಾರದ ಮೆರಗನ್ನು ಹೆಚ್ಚಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296