ತುಮಕೂರು: ಸಮಾಜದಲ್ಲಿನ ಬಲ್ಲಿದರ ಸಹವಾಸದಿಂದ ಬರವಣಿಗೆ –ಬೆಳವಣಿಗೆ ಸುಲಭವಾಗಿದ್ದು, ಹಂಪನ ಅಧ್ಯಯನದಲ್ಲಿ ಅವರ ಗಂಭೀರತೆ ಹೊಂದಿದ್ದರು. ಕಮಲ –ಹಂಪನಾ ದಂಪತಿಗಳು ಪುಸ್ತಕ ಪ್ರಿಯರಾಗಿದ್ದರು. ಸಂಶೋಧನೆಗೆ ತಳಹದಿ ಅಗತ್ಯ ಹಾಗೂ ಯಾವುದೇ ವಿಷಯಕ್ಕೆ ವಿಮರ್ಶೆ ಅಗತ್ಯ ಎಂದು ಹಿರಿಯ ಸಾಹಿತಿ ಸಂಶೋಧಕ ಡಾ.ಎಸ್.ಪಿ.ಪದ್ಮಪ್ರಸಾದ್ ಜೈನ್ ತಿಳಿಸಿದರು .
ಅವರಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಡಾ.ಹಂಪನ ಬದುಕು– ಬರಹ ಕುರಿತು ಗೋಷ್ಠಿ -2 ರ ಬಾಳಿನ ಬಗ್ಗೆ ಉಪನ್ಯಾಸ ನೀಡಿದರು .
ಇವರ ನೀತಿಯಿಂದ ಸ್ಥಳೀಯರಿಂದ ವಿದೇಶಿ ಸಂಶೋಧಕರವರೆಗೂ ತುಲನೆಯಿಂದ ಹಲವಾರು ಸಂಶೋಧಕರು ಕಣ್ಣು ತೆರೆದಿದ್ದಾರೆ, ಹಂಪನಾ ಸಾಹಿತ್ಯ ಪರಿಷತ್ ಸಾರಥ್ಯ ವಹಿಸಿ ಹಲವಾರು ಪುಸ್ತಕ ಬರೆದಿದ್ದಾರೆ, ಇವರು ಪುಸ್ತಕಗಳು ಪಠ್ಯಪುಸ್ತಕಗಳಾಗಿವೆ, ಓಲೆ ಗರಿ ಅಂತ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದಾರೆ .ಕನ್ನಡ ಸೇವಕನಾಗಿ ದುಡಿದಿದ್ದಾರೆ, ಜೀವನದ ಯಾವುದೇ ಕಾರ್ಯಕ್ಕೆ ಕಾಲವೇ ವಿಮರ್ಶಕ ಎಂದು ನಂಬಿದ್ದರು ಎಂದರು.
ಡಾ.ಹಂಪನಾ ಅವರ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳ ಕುರಿತು ವಿಚಾರ ಮಂಡಿಸಿದ ಸಾಹಿತಿ ಡಾ.ಸಂಕಂ ಗೋವರ್ಧನ್ ಹಂಪನಾ 20 ನೇ ಶತಮಾನದ ಸಾಹಿತ್ಯ ಚರಿತ್ರೆಯ ರುವಾರಿ. ಸಾಹಿತ್ಯ ,ಸಂಶೋಧನೆ ,ಸೃಜನಶೀಲ ಕೃತಿಗಳು, ಬರೆದಿದ್ದಾರೆ. ಹಂಪನ ಮಾತಿನ ಛಲಗಾರರು ಅವರ ಮನಸ್ಸು ಮೃದುವಾಗಿದ್ದು, ಸಂಶೋಧನಾ ಬರವಣಿಗೆಯಲ್ಲಿ ಸರಸ್ವತಿ ನೆಲೆಸಿದ್ದಾರೆ, ನಾಗಕುಮಾರ ಪುಷ್ಪಾದಿ ಕೃತಿ ಪರಿಷ್ಕರಿಸಿ ಎರಡು ಭಾಗ ಮಾಡಿದರು. ಹಲವಾರು ಸಾಹಿತ್ಯ, ಪದ್ಯ, ಗದ್ಯ , ವಚನಗಳನ್ನ ರಚಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು .
ಪೊನ್ನನ ಬಗ್ಗೆ ಹೆಚ್ಚು ವಿಚಾರಗಳು ಬೆಳಕಿಗೆ ಬಾರದಿರುವುದು ,ಆಧುನಿಕ ಸಂಶೋಧಕರು ಬರೆದ ಪುಸ್ತಕ ಹೊಸ ಸಂಶೋಧಕರಿಗೆ ಆದ್ಯತೆ ನೀಡದಿರುವುದು ವಿಷಾದನಿಯ ಎಂದರು.
ಹಂಪನ ಕೃತಿಗಳು ಶ್ರೀ ಕ್ಷೇತ್ರ ಹೊಂಬುಜ ದ ಬೆಳವಣಿಗೆಗೆ ಸಹಕಾರಿಯಾಯಿತು .ಜೈನ ಕಥೆಗಳು ಸಾಹಿತ್ಯಕ್ಕೆ ಹಂಪನ ಕೊಡುಗೆ ಅಪಾರ ಎಂದವರು ಇವರ ಪುಸ್ತಕಗಳು ಮರುಮುದ್ರಣವಾಗಿ ಎಂದರು.
ಜಾನಪದ,ನೋಂಪಿ, ಕವನಗಳು, ಜಾತ್ರೆಗಳ ಕೃತಿ ರಚಿಸಿದ್ದಾರೆ, ಭಾಷಾ ವಿಜ್ಞಾನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದಾರೆ ,ಯಕ್ಷ — ಯಕ್ಷಿ ಕೃತಿ ಮರುಮುದ್ರಣ ಕಂಡಿದೆ .ಅವರ ವಿನ್ಯಾಸದ ಪರಿಕಲ್ಪನೆಗಳು ವಿಶೇಷವಾದವು .ಇವರಿಗೆ 15 ಅಭಿನಂದನಾ ಗ್ರಂಥ ರಚಿಸಲಾಗಿದೆ ಎಂದರು.
ಡಾ. ಗೋವಿಂದರಾಜು ಸ್ವಾಗತಿಸಿದರು. ಕಂಟಲಗೆರೆ ಸಣ್ಣ ಹೊನ್ನಯ್ಯ ಕಾರ್ಯಕ್ರಮ ನಿರೂಪಿಸಿದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q