ಬೆಂಗಳೂರಿನ ಪ್ರದೇಶವೊಂದರಲ್ಲಿ ನವಜಾತ ಶಿಶುವನ್ನು ಪಾಲಕರು ಎಸೆದು ಹೋಗಿರುವ ಘಟನೆ ಮಾನವೀಯತೆ ಹಾಗೂ ನೈತಿಕತೆಯ ಪ್ರಶ್ನೆಗಳನ್ನು ಸೃಷ್ಟಿಸಿದೆ. ನವಜಾತ ಶಿಶುವನ್ನು ಎಸೆದು ಹೋಗಿರುವ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಆರೋಗ್ಯವಂತವಾಗಿದೆ.
ಜೀವಂತ ನವಜಾತ ಶಿಶುವನ್ನು ಕಸದಂತೆ ಎಸೆದು ಹೋಗುವ ತಾಯಿ ಯಾವ ಸಂದೇಶವನ್ನು ನೀಡುತ್ತಿದ್ದಾಳೆ? ಯಾವ ಕಾರಣಕ್ಕೆ ಇಂತಹ ಅಮಾನವೀಯ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದೆ ಎನ್ನುವ ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಘಟನೆಗಳಿಗೆ ಸಮಾಜದಲ್ಲಿನ ಅಜ್ಞಾನ ಕಾರಣವೋ? ಮಾನಸಿಕ ಒತ್ತಡಗಳಿಂದ ಇಂತಹ ಘಟನೆಗಳು ನಡೆಯುತ್ತಿದೆಯೇ? ಮತ್ಯಾವ ಕಾರಣಕ್ಕೆ ತಾಯಿ ತನ್ನ ಮಗುವನ್ನು ಎಸೆದು ಹೋಗುತ್ತಿದ್ದಾಳೆ ಎನ್ನುವ ಗಂಭೀರ ಚಿಂತನೆ ನಡೆಯಬೇಕಿದೆ.
ಸಾಧ್ಯವಿರುವ ಪರಿಹಾರಗಳು:
ತಾಯಿಗೆ ತನ್ನ ಮಗುವನ್ನು ಪಾಲನೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಅನೈತಿಕ ಸಂಬಂಧಗಳಿಂದಲೋ, ಮದುವೆಗೆ ಮುಂಚಿತವಾಗಿ ಗರ್ಭ ಧರಿಸಿದ್ದರಿಂದ ಸಮಾಜಕ್ಕೆ ಹೆದರಿ ಮಗುವನ್ನು ಎಸೆಯುವ ಪ್ರಕರಣಗಳು ನಡೆಯುತ್ತಿದ್ದರೆ. ಅಂತಹ ಘಟನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಪರ್ಯಾಯ ಮತ್ತು ಸುಲಭವಾದ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.
ಮಗುವನ್ನು ಸಾಕಲು ತೊಡಕು ಇರುವ ತಾಯಿ, ಪಾಲಕರು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ, ಮಕ್ಕಳ ಸಹಾಯವಾಣಿ 1098 ಲಭ್ಯವಿದೆ. ಇಂತಹ ಸಂದರ್ಭಗಳಲ್ಲಿ, ಮಗುವನ್ನು ಇವುಗಳಿಗೆ ಹಸ್ತಾಂತರಿಸುವ ಮೂಲಕ ಶಿಶುವಿಗೆ ಸುರಕ್ಷತೆಯನ್ನು ಒದಗಿಸಬಹುದು. ಸರ್ಕಾರವು ಈ ಸೇವೆಗಳನ್ನು ಗೌಪ್ಯವಾಗಿಯೂ ಮತ್ತು ನೈತಿಕತೆಯನ್ನು ಕಾಪಾಡುವ ದೃಷ್ಟಿಯಿಂದ ನಿರ್ವಹಿಸುತ್ತದೆ. ಮಗುವಿನ ಜವಾಬ್ದಾರಿಯನ್ನು ಸರ್ಕಾರದ ಪ್ರಾಮಾಣಿಕ ಘಟಕಗಳು ತೆಗೆದುಕೊಳ್ಳಲು ಸಿದ್ಧವಾಗಿವೆ.
ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿ:
ಅನೈತಿಕ ಗರ್ಭಧಾರಣೆಗಳು ಅಥವಾ ಆರ್ಥಿಕ ತೊಂದರೆಗಳಿಂದ ಮಗುವನ್ನು ತ್ಯಜಿಸುವಂತಹ ದುರಂತಗಳು ನಡೆಯಬಾರದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವ್ಯಾಪಕವಾಗಿ ಮಾಡಬೇಕಾಗಿದೆ. ಮಹಿಳಾ ಆರೋಗ್ಯ, ಸಮುದಾಯದ ಬೆಂಬಲ, ಮತ್ತು ಸೌಲಭ್ಯಗಳ ಕುರಿತು ಇನ್ನಷ್ಟು ಜಾಗೃತಿ ಮೂಡಿಸಬೇಕು.
ಶಿಶುವಿನ ರಕ್ಷಣೆಯಲ್ಲಿರುವ ಪಾತ್ರಗಳು:
ಈ ಘಟನೆಯಲ್ಲಿಯೇ ಒಂದು ಚಿಕ್ಕ ಬೆಳಕಿನ ಕಿರಣ ಎಂದರೆ, ಪೊಲೀಸರು ತಕ್ಷಣದ ಕಾರ್ಯಾಚರಣೆ ಮಾಡಿದ್ದು, ಶಿಶುವಿನ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕಾರ್ಯಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಬೇಕಿದೆ.
ಪ್ರಸ್ತುತ ಸಂದರ್ಭದಲ್ಲಿ ಸಮಾಜ ಸಮರ್ಥವಾದ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಮಗುವನ್ನು ತ್ಯಜಿಸುವುದಕ್ಕಿಂತ, ಸರ್ಕಾರದ ಆಯೋಗಗಳಿಗೆ ಶಿಶುವನ್ನು ಹಸ್ತಾಂತರಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಜನರಿಗೆ ಈ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನ ಸಂಬಂಧಿಸಿದ ಇಲಾಖೆಗಳು ಮಾಡಬೇಕಿದೆ. ಇಂತಹ ಕೃತ್ಯಗಳನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296