nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!

    November 5, 2026

    ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?

    November 5, 2026

    ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    November 5, 2026
    Facebook Twitter Instagram
    ಟ್ರೆಂಡಿಂಗ್
    • ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!
    • ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?
    • ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ
    • ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!
    • ಯುವಜನರಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ; ನಿರ್ಲಕ್ಷಿಸಬಾರದ ಈ ಲಕ್ಷಣಗಳು!
    • ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ
    • ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ
    • ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಶ್ವ ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಯುವ ಶಕ್ತಿ ಪಣ ತೊಡಬೇಕಿದೆ: ಎಸ್. ಆರ್ ಮುಗನೂರಮಠ
    ಜಿಲ್ಲಾ ಸುದ್ದಿ August 15, 2023

    ವಿಶ್ವ ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಯುವ ಶಕ್ತಿ ಪಣ ತೊಡಬೇಕಿದೆ: ಎಸ್. ಆರ್ ಮುಗನೂರಮಠ

    By adminAugust 15, 2023No Comments2 Mins Read
    s r muganoorumata

    ಬಾಗಲಕೋಟೆ: ಭಾರತವು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠವಾಗಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಾಧನೆಯಿಂದ ವಿಶ್ವಕ್ಕೆ ಮಾದರಿಯಾಗಿದೆ. ಭ್ರಷ್ಟಾಚಾರ, ಭಯೋತ್ಪಾದನಾ, ಕೋಮುವಾದ, ಜಾತ್ಯತೀತ ರಾಷ್ಟ್ರಕ್ಕಾಗಿ ಯುವಶಕ್ತಿಯು ಈ ದಿನ ಸಂಕಲ್ಪ ತೊಡಬೇಕಾಗಿದೆ ಎಂದು ಪ್ರಾಚಾರ್ಯರಾದ ಎಸ್. ಆರ್ ಮುಗನೂರಮಠ ಹೇಳಿದರು.

    ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಸ್ಥಾಪನೆಗಾಗಿ ರಕ್ತ ತರ್ಪಣಗೈದ ವೀರಯೋಧರಿಗೆ ಗೌರವ ಸಲ್ಲಿಸುತ್ತ ಇಂದು ಕ್ವಿಟ್ ಇಂಡಿಯಾದ 79ನೇ ವರ್ಷಾಚರಣೆಯ ಸಂದರ್ಭದಲ್ಲಿದ್ದೆವೆ. ಭಾರತ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗುವುದಲ್ಲದೆ, ಸ್ವಯಂಪೂರ್ಣ ಸ್ವಾವಲಂಭಿಯಾಗಿ ಆತ್ಮಗೌರವದಿಂದ ಪ್ರತಿಯೊಬ್ಬ ಪ್ರಜೆಯೂ ಬದುಕು ಕಟ್ಟಿಕೊಳ್ಳುವ ಸುಭದ್ರ ದೇಶವಾಗಿ ನಿರ್ಮಾಣವಾಗಿದೆ. ರಾಷ್ಟ್ರಾಭಿವೃದ್ಧಿಗೆ ಪೂರಕವಾದ ಅನೇಕ ಯೋಜನೆಗಳು, ಕ್ರಾಂತಿಗಳು ಪ್ರಗತಿಯ ಮೈಲುಗಲ್ಲುಗಳಾಗಿದ್ದು ನ್ಯೂಕ್ಲಿಯರ ಟೆಕ್ನಾಲಾಜಿ, ಸ್ಪೇಸ್ ಟೆಕ್ನಾಲಾಜಿಯಂತಹ ಅನೇಕ ಕ್ಷೇತ್ರಗಳಲ್ಲಿ ಭಾರತವು ತನ್ನ ಭೀಮ ಹೆಜ್ಜೆಗಳನ್ನಿರಿಸಿದೆ ಎಂದರು.

    ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ‘ಮನದ ಮಾತು’ ಕಾರ್ಯಕ್ರಮ ಹಾಗೂ ಸ್ವಚ್ಛಭಾರತ ಅಭಿಯಾನ, ಸುವರ್ಣ ಗ್ರಾಮ ಯೋಜನೆ, ಇದೀಗ ತಾನೇ ಅನುಷ್ಟಾನಗೊಳ್ಳುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಗಳು ಹೊಸ ಮನ್ವಂತರಕ್ಕೆ ನಾಂದಿಯಾಗುತ್ತಿವೆ. ಆದರೆ ಮತ್ತೊಂದೆಡೆ ನಗರೀಕರಣದ ಸೋಗಿನಲ್ಲಿ ಪ್ರಕೃತಿ ನಾಶ, ಮಾರಕ ರೋಗಗಳು, ನೆರೆಹಾವಳಿ, ಕೋಮುವಾದ, ಭಯೋತ್ಪಾದನೆ, ಮಹಿಳೆಯರ ಮೇಲಾಗುವ ಅತ್ಯಾಚಾರ ರೈತರ ಆತ್ಮಹತ್ಯೆಯಂತಹ ದುರ್ಘಟನೆಗಳು ರಾಷ್ಟ್ರವನ್ನು ದುರ್ಬಲಗೊಳಿಸುತ್ತಿದ್ದು ಅವುಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

    ಸರ್ವಾಂಗೀಣ ಅಭಿವೃದ್ಧಿಯ ರಾಷ್ಟ್ರ ನಿರ್ಮಾಣದ ಕನಸು ನನಸಾಗಲು, ಪ್ರಧಾನಿಗಳ ಆಶಯದಂತೆ ನಾವೆಲ್ಲ ಸಂಕಲ್ಪ ಸ್ವಚ್ಛ ಭಾರತ ಸಂಕಲ್ಪ, ವ್ಯಸನಮುಕ್ತ. ಬಡತನ ಮುಕ್ತ ಕೋಮುವಾದ ಮುಕ್ತ ಸಂಕಲ್ಪದೊಂದಿಗೆ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.

    ಎನ್.ಸಿ.ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯರುಗಳಾದ ಬಿ.ಆರ್ ಪಾಟೀಲ್, ಎನ್.ಆರ್ ಹಳ್ಳೂರ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ವಿ.ಎಸ್ ಚಿಗರಿ ಸೇರಿದಂತೆ ಎಲ್ಲ ಪ್ರಾದ್ಯಾಪಕರು ಎನ್.ಸಿಸಿ ಮತ್ತು ಎನ್‌ಎಸ್‌ಎಸ್ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!

    November 5, 2026

    ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ

    November 5, 2026

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    Comments are closed.

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!

    November 5, 2026

    ನಿದ್ದೆ ಮಾಡುವಾಗ ಸಣ್ಣ ಶಬ್ದ ಕೇಳಿಸಿದರೂ ಕೆಲವರು ತಕ್ಷಣ ಎಚ್ಚರಗೊಳ್ಳುತ್ತಾರೆ. ಯಾರಾದರೂ ಹೆಸರಿಟ್ಟು ಕರೆದರೆ ನಿದ್ದೆಯಿಂದ ಎದ್ದುಬಿಡುತ್ತಾರೆ. ಆದರೆ ಇಡೀ…

    ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?

    November 5, 2026

    ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    November 5, 2026

    ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!

    November 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.