ತಂಗಲ್ಲಪಲ್ಲಿ: ನವಿಲು ಕರಿ ಮಾಡುವುದು ಹೇಗೆ ಅಂತ ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್ ವೊಬ್ಬ ಇದೀಗ ಜೈಲು ಸೇರಿದ್ದು, ರಾಷ್ಟ್ರಪಕ್ಷಿಯನ್ನು ಕೊಂದು ಅಡುಗೆ ಮಾಡಿದ ಯೂಟ್ಯೂಬರ್ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.
ಪ್ರಣಯ ಕುಮಾರ್ ಎಂಬಾತ ನವಿಲು ಕರಿ ರೆಸಿಪಿ ಹೆಸರಿನಡಿ ವಿಡಿಯೋ ಮಾಡಿದ್ದ. ಈ ವಿಡಿಯೋ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಸಿರಿಸಿಲ್ಲಾ ಜಿಲ್ಲೆಯ ಎಸ್ಪಿ ರಾಜಣ್ಣ ಪ್ರಕರಣ ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರಣಯ್‌ಕುಮಾರ್ ಯೂಟ್ಯೂಬ್ ಚಾನೆಲ್ ನನ್ನು ಪರಿಶೀಲನೆ ನಡೆಸಿದ ವೇಳೆ ಕಾಡು ಹಂದಿಯ ಕರಿ ಮಾಡುವುದು ಹೇಗೆ ಅಂತಲೂ ಈತ ವಿಡಿಯೋ ಮಾಡಿರುವುದು ಬಯಲಾಗಿದೆ. ಸದ್ಯ ಈ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದ್ದು, ಆತನ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಕ್ರಿಯೇಟರ್ಸ್ ಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಯಾವುದೇ ವಿಡಿಯೋಗಳನ್ನು ಪೋಸ್ಟ್ ಮಾಡಬೇಕಾದರೂ, ನಮ್ಮ ನೆಲದ ಕಾನೂನು ಅರಿತು ವಿಡಿಯೋಗಳನ್ನು ಪೋಸ್ಟ್ ಮಾಡಬೇಕಿದೆ. ಇಲ್ಲವಾದರೆ, ನೀವೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296