ತೆಲಂಗಾಣ: ನೀರು ಕುಡಿಯಲು ಹೋಗಿ 30 ಕೋತಿಗಳು ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ನಂದಿಕೊಂಡ ಪುರಸಭೆ ವ್ಯಾಪ್ತಿಯ ನಾಗಾರ್ಜುನ ಸಾಗರ ಬಳಿಯ ನೀರಿನ ಟ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬಿಸಿಲಿನ ತಾಪದಿಂದ ಮಂಗಗಳು ನೀರಿಗಾಗಿ ಲೋಹದ ಹಾಳೆಗಳ ಮೂಲಕ ಟ್ಯಾಂಕ್ಗೆ ನುಗ್ಗಿರಬಹುದು ಆದರೆ ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮೂವತ್ತು ಕೋತಿಗಳು ಸಾವನ್ನಪ್ಪಿದ್ದರು ಅದೇ ನೀರನ್ನು ಜನರು ಹತ್ತು ದಿನಗಳ ಕಾಲ ಕುಡಿದ್ದಿದ್ದರು. ಅದೇ ನೀರನ್ನು ಸೇವಿಸಿದ್ದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ನೀರಿನ ಟ್ಯಾಂಕ್ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ವಿಷಯ ತಿಳಿದ ನಂದಿಕೊಂಡ ಪುರಸಭೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೀರಿನ ಟ್ಯಾಂಕ್ನಿಂದ ಮಂಗಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕೋತಿಗಳು ಬಿದ್ದ ಘಟನೆಗೆ ಪ್ರತಿಕ್ರಿಯಿಸಿದ ಅಧೀಕ್ಷಕ ಎಂಜಿನಿಯರ್ ನಾಗೇಶ್ವರರಾವ್, ಕೇವಲ 50 ಮನೆಗಳು ಮಾತ್ರ ಎಂದು ಸ್ಪಷ್ಟಪಡಿಸಿದರು.
ಕೋತಿಗಳು ಬಿದ್ದು ಸಾವನ್ನಪ್ಪಿದ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದ್ದು, ಟ್ಯಾಂಕ್ ಸಂಪೂರ್ಣ ಕ್ಲೋರಿನೇಷನ್ ಮಾಡಿದ ನಂತರ ಕುಡಿಯುವ ನೀರು ಬಿಡಲಾಗುವುದು. ಅಲ್ಲಿಯವರೆಗೆ ಈ ಟ್ಯಾಂಕ್ನಿಂದ ನೀರು ಪಡೆಯುವ ಮನೆಗಳಿಗೆ ಪರ್ಯಾಯ ಮಾರ್ಗದ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಸ್ಥಳೀಯ ಪುರಸಭೆ ಅಧಿಕಾರಿಗಳು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296