ಬೆಂಗಳೂರು: ಶಾಲಾ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮವನ್ನು ಸಡಿಲ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅನೇಕರು ಈ ಸಂಬಂಧ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಕೂಡಾ ಅವರ ಅರ್ಜಿ ವಜಾ ಮಾಡಿದೆ. ಕೋರ್ಟ್ ನಲ್ಲಿ ಯಾವುದೇ ಆದೇಶಗಳು ಬಂದರೂ ಕೂಡ ನಾವು ಪಾಲನೆ ಮಾಡುತ್ತೇವೆ ಎಂದು ಅವರು ಹೇಳಿದರು.
ನಾವು ನಿಯಮದ ಪ್ರಕಾರ ನಡೆದುಕೊಳ್ಳಬೇಕು. 1 ತಿಂಗಳು, 2 ತಿಂಗಳ ಕಡಿಮೆ ಇರುವವರಿಗೆ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. ಇದೆಲ್ಲವೂ ಚರ್ಚೆ ಆಗೋ ವಿಚಾರ ಎಂದು ಹೇಳಿದರು.
ಪೋಷಕರು 7 ದಿನ ಕಡಿಮೆ ಅಂತಿದ್ದಾರೆ. ಆದರೆ ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4