nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    February 7, 2026

    ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    February 7, 2026

    ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು

    February 7, 2026
    Facebook Twitter Instagram
    ಟ್ರೆಂಡಿಂಗ್
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    • ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
    • ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು
    • ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ?: ಡಿಕೆಶಿ ವ್ಯಂಗ್ಯ
    • ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!
    • ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ
    • ಸೇಂದಿ ಮಾರಾಟಕ್ಕೆ ಅವಕಾಶ ಕೊಡಿ: ಪ್ರಣವಾನಂದ ಸ್ವಾಮೀಜಿ ಒತ್ತಾಯ!
    • ಸಂಸ್ಕೃತಿಯನ್ನು ಗೌರವಿಸುವ ಧಾರ್ಮಿಕ ಹಬ್ಬಗಳು ಹೆಚ್ಚು ನಡೆಯಬೇಕು: ಪಿ.ಎನ್‌.ಕೃಷ್ಣಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಿ ರೂಪಾ ವಿರುದ್ದ ಬೇಳೂರು ರಾಘವೇಂದ್ರ ಶೆಟ್ಟಿ ಇನ್ನಷ್ಟು ಆರೋಪ, ದೂರು
    ಜಿಲ್ಲಾ ಸುದ್ದಿ June 2, 2022

    ಡಿ ರೂಪಾ ವಿರುದ್ದ ಬೇಳೂರು ರಾಘವೇಂದ್ರ ಶೆಟ್ಟಿ ಇನ್ನಷ್ಟು ಆರೋಪ, ದೂರು

    By adminJune 2, 2022No Comments2 Mins Read
    d rupa

    ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್‌ ಅವರ ವಿರುದ್ಧ ಬುಧವಾರ ಮತ್ತೊಂದು ದೂರನ್ನು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ನೀಡಿದ್ದು, ಅದರಲ್ಲಿ ರೂಪಾ ತಾವು ನಡೆಸಿರುವ ಅಕ್ರಮಕ್ಕೆ ಕಡತಗಳನ್ನು ಸರಿಪಡಿಸುವ, ನಾಶಪಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ರೂಪಾ ಅವರು ಒಂದು ಹೊಸ ಇನೋವಾ ಕ್ರಿಸ್ಟಾಕಾರನ್ನು ಅವರ ಉಪಯೋಗಕ್ಕೆ, ಇನ್ನೊಂದು ಇನ್ನೋವಾ, ನಿಸಾನ್‌ ಸನ್ನಿ ಮತ್ತು ಒಂದು ದ್ವಿಚಕ್ರ ವಾಹನವನ್ನು ಮನೆಯ ಬಳಕೆಗೆ ಉಪಯೋಗಿಸಿ ನಿಗಮಕ್ಕೆ ಹೊರೆ ಮಾಡಿದ್ದಾರೆ. ಅಕ್ರಮ ನಡೆಸಿದ್ದಾರೆ ಎಂದು ನಾನು ಆರೋಪ ಮಾಡಿದ ಬಳಿಕ ಕಡತಗಳನ್ನು ತರಿಸಿಕೊಂಡು ಕೆಲವನ್ನು ತಿದ್ದಿ ಸರಿಪಡಿಸುವ, ಮತ್ತೆ ಕೆಲವನ್ನು ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.


    Provided by
    Provided by

    ಮೂರು ಕಾರಿಗೆ ಡೀಸೆಲ್‌ ಬಿಲ್‌ ಮಾಡಿಸಿಕೊಳ್ಳಲು ಅನುಕೂಲವಾಗಲಿ ಎಂದು 2 ವರ್ಷದಿಂದ ಕೆಲಸ ಮಾಡುತ್ತಿದ್ದ ಹಳೆಯ ಅಕೌಂಟೆಂಟ್‌ ಸುಭೇಶ್‌ ಅವರಿಗೆ ಕಿರುಕುಳ ನೀಡಿ ಓಡಿಸಿ ಶೋ ರೂಂನಲ್ಲಿ ಕ್ಯಾಶಿಯರ್‌ ಆಗಿದ್ದ ಶ್ರೀಧರ್‌ ಎಂಬ ವ್ಯಕ್ತಿಯನ್ನು ಅನಧಿಕೃತವಾಗಿ ಜಿ.ಎಂ. ಹುದ್ದೆಗೆ ನೇಮಕ ಮಾಡಿಕೊಂಡಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

    ವೈಯಕ್ತಿಕ ಕೆಲಸದ ಮೇಲೆ ತೆರಳುವಾಗ ವಿಮಾನದ ಟಿಕೆಟ್‌, ಹೋಟೆಲ್‌ ವಾಸ್ತವ್ಯ ಮತ್ತು ಕಚೇರಿಯ ಸಿಬ್ಬಂದಿಯ ಲೆಕ್ಕವನ್ನೂ ತೋರಿಸಿದ್ದಾರೆ. ಮೂವರು ಚಾಲಕರನ್ನು ನೇಮಿಸಿಕೊಂಡು ಸುಮಾರು 1.25 ಕೋಟಿಗೂ ಅಧಿಕ ಹಣವನ್ನು ನಿಗಮಕ್ಕೆ ಹೊರೆ ಮಾಡಿದ್ದಾರೆ. ಈ ಬಗ್ಗೆ ನಿಗಮದಲ್ಲಿ ದಾಖಲೆಗಳಿದ್ದು, ಪರಿಶೀಲನೆ ನಡೆಸಿ ರೂಪಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ನಿಗಮದ ಶೋ ರೂಂಗಳಲ್ಲಿ ವಿದೇಶದ ಮತ್ತು ಬೆಂಗಳೂರಿನ ಸ್ನೇಹಿತರಿಗೆ ಶೇ.30ರಷ್ಟುರಿಯಾಯಿತಿ ನೀಡಿದ್ದಾರೆ. ಹೀಗೆ ರಿಯಾಯಿತಿ ನೀಡಿದರೆ ಮಂಡಳಿಗೆ ತಿಳಿಸಬೇಕೆಂಬ ನಿಯಮವಿದೆ. ಆದರೆ ಇದನ್ನು ಮಂಡಳಿಯ ಗಮನಕ್ಕೆ ತಂದಿಲ್ಲ. ಕಚೇರಿಯ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಕ್ಕೆ ಕಳುಹಿಸುತ್ತಿದ್ದು, ಈ ಬಗ್ಗೆ ತನಿಖೆ ಆಗಬೇಕು. ಎರಡು ದಿನದಿಂದ ನನ್ನ ಕಚೇರಿಯ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಟೆಂಡರ್‌ ಅನ್ನು 5 ಲಕ್ಷಕ್ಕೆ ಮಿತಿಗೊಳಿಸಿ ಕೆಟಿಪಿಪಿ ನಿಯಮ ಪಾಲಿಸದೆ ತುಂಡು ಗುತ್ತಿಗೆ ನೀಡಿ ಬೋರ್ಡ್‌ ಗಮನಕ್ಕೆ ತರದೆ ಬಿಲ್‌ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 75 ಲಕ್ಷ ಅನುದಾನ ಬರುತ್ತದೆ ಎಂದು ತಪ್ಪು ಮಾಹಿತಿ ನೀಡಿ ಹೈದರಾಬಾದ್‌ನಲ್ಲಿ ನಿಗಮದ ಶೋ ರೂಂ ಉದ್ಘಾಟನೆಗೆ 58 ಲಕ್ಷ ರು. ಖರ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಕಡತ ಕೇಳಿದರೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ವರದಿ: ಮುರುಳಿಧರನ್ ಆರ್., ಹಿರಿಯೂರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸರಗೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ

    February 5, 2026

    ರಾಚಯ್ಯ ಸಂವಿಧಾನ, ಕೊಡಲಿ ಕಾನೂನು: ಲ್ಯಾಂಡ್‌ ಲಾರ್ಡ್‌ ಸಿನಿಮಾ ಬಗ್ಗೆ ಸಮಾಜ ಸೇವಕ ಮದನ್ ಮ್ಯಾಡಿ

    February 4, 2026

    ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ

    February 2, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    February 7, 2026

    ತುಮಕೂರು: ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ತುಮಕೂರು ನಗರದ ಸೈಬರ್…

    ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    February 7, 2026

    ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು

    February 7, 2026

    ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ?: ಡಿಕೆಶಿ ವ್ಯಂಗ್ಯ

    February 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.