ಕೊರಟಗೆರೆ: ಪಟ್ಟಣದ ಶಿವಗಂಗಾ ಚಿತ್ರ ಮಂದಿರದಲ್ಲಿ ಕೊರಟಗೆರೆ ಪೊಲೀಸ್ ಅಧಿಕಾರಿಗಳಾದ ಯೋಗೀಶ್ ಮತ್ತು ಮಂಜುನಾಥ್ ರವರಿಗೆ ರಜತ ಕಿರೀಟಧಾರಣೆ ಸಮಾರಂಭದ ಪ್ರಯುಕ್ತ ತುಮಕೂರಿನ ಹೆಸರಾಂತ ಶ್ರೀ ಬಸವೇಶ್ವರ ಡ್ರಾಮಾ ಸೀನ್ಸ್ ಮತ್ತು ಶ್ರೀ ರಾಮೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ವಿದ್ಯುತ್ ದೀಪಗಳಿಂದ ಅಲಂಕೃತವಾದ ರಂಗ ಸಜ್ಜಿಗೆಯಲ್ಲಿ ಐತಿಹಾಸಿಕ ಭಗವದ್ಗೀತೆ ಅಥವಾ ಶ್ರೀ ಕೃಷ್ಣ ಸಂಧಾನವೆಂಬ ಪೌರಾಣಿಕ ನಾಟಕ ಪ್ರದರ್ಶನ ಕಾಣಲಿದೆ.
ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳ ಮತ್ತು ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ ತಾಲೂಕಿನ ಮತ್ತು ಜಿಲ್ಲೆಯ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಹಿರಿಯ ಮತ್ತು ಕಿರಿಯ ನುರಿತ ಕಲಾವಿದರ ತಂಡದಿಂದ ದಿನಾಂಕ 31-7-2022ರ ಭಾನುವಾರ ಬೆಳಿಗ್ಗೆ ಸುಮಾರು 10 : 30 ಗಂಟೆಗೆ ಈ ಅದ್ಭುತವಾದ ನಾಟಕವು ಪ್ರದರ್ಶನ ಕಾಣಲಿದ್ದು ತಾಲೂಕಿನ ಕಲಾಭಿಮಾನಿಗಳು, ಕಲಾರಸಿಕರ, ಕಲಾಪೋತ್ಸಾಹಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ಕಲಾತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz