nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್

    April 15, 2026

    ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ

    April 15, 2026

    ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್

    April 15, 2026
    Facebook Twitter Instagram
    ಟ್ರೆಂಡಿಂಗ್
    • ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್
    • ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ
    • ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್
    • ಡಾ.ಅಂಬೇಡ್ಕರ್ ಸಂವಿಧಾನ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ: ಸಚಿವ ಸಂತೋಷ ಎಸ್.ಲಾಡ್
    • ಕೃಷಿ ಪ್ರಾಯೋಗಿಕ ಪರೀಕ್ಷೆ: ರೈತರ ಮಕ್ಕಳಿಗೆ ತುಮಕೂರಿನಲ್ಲಿ ಏಪ್ರಿಲ್ 19ರಂದು ಉಚಿತ ತರಬೇತಿ ಕಾರ್ಯಾಗಾರ
    • ತುಮಕೂರು: ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಅಮಾನಿಕೆರೆಯಲ್ಲಿ ಕಣ್ಮನ ಸೆಳೆದ ಭವ್ಯ ‘ಬೋಟ್ ಪರೇಡ್’
    • ಪರಿಶಿಷ್ಟರಿಗೆ ಬುದ್ಧ ಬಸವ ಅಂಬೇಡ್ಕರ್ ನಿವೇಶನ ಹಂಚಿಕೆ: ಖಾಸಗಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಯೋಜನೆ: ಸಚಿವ ಸತೀಶ್ ಜಾರಕಿಹೊಳಿ
    • ಬಳ್ಳಾರಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಗ್ರಂಥಾಲಯ ನಿರ್ಮಿಸಲು ನಿರ್ಧಾರ: ಶಾಸಕ ನಾರಾ ಭರತ್ ರೆಡ್ಡಿ ಹೇಳಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್
    ರಾಜ್ಯ ಸುದ್ದಿ August 10, 2022

    ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್

    By adminAugust 10, 2022No Comments2 Mins Read
    kalla

    ಬೆಂಗಳೂರು: ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ‌ ಕೃತ್ಯಗಳಲ್ಲಿ ಭಾಗಿಯಾಗಿದ್ದ.

    ಸದ್ಯ ಹಲಸೂರು ಗೇಟ್ ಪೊಲೀಸರು ಈತನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 6 ಲಕ್ಷದ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ವಾಲ್ಮೀಕಿ ನಗರದ ನಿವಾಸಿಯಾಗಿರುವ ಇಮ್ರಾನ್ ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಈತನ ವಿರುದ್ಧ ಬೆಂಗಳೂರಿನಲ್ಲಿಯೇ 30 ಪ್ರಕರಣ ದಾಖಲಾಗಿವೆ. ರಾಜ್ಯದ ಹಲವು ಕಡೆಗಳಲ್ಲಿ ಇಮ್ರಾನ್ ವಿರುದ್ಧ 60ಕ್ಕಿಂತ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿಬಂದಿದ್ದರೂ ಒಂದು ಪ್ರಕರಣದಲ್ಲಿ ಈತನಿಗೆ ಶಿಕ್ಷೆಯಾಗಿರಲಿಲ್ಲ.ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ತನ್ನ ಚಾಳಿ ಕೈಚಳಕ ತೋರುತ್ತಿದ್ದ.


    Provided by
    Provided by

    ಕಳ್ಳತನವನ್ನೇ‌ ಕಾಯಕ ಮಾಡಿಕೊಂಡಿದ್ದ ಯಾಸೀನ್, ಏಕಾಂಗಿಯಾಗಿ ಸುಖಾಸುಮ್ಮನೆ ತಿರುಗುತ್ತಿದ್ದ. ಮನೆಯಲ್ಲಿ ಅಥವಾ ಅಂಗಡಿ-ಕಚೇರಿಗಳಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದ‌. ಕೃತ್ಯದ ಬಳಿಕ ಗೋವಾ, ಮೈಸೂರು ಹಾಗೂ ರಾಯಚೂರು ಸೇರಿ ಹಲವು ಕಡೆಗಳಲ್ಲಿ ಕದ್ದ ಮಾಲುಗಳನ್ನು ಮಾರಾಟ ಮಾಡಿ ಶೋಕಿ‌ ಜೀವನ ನಡೆಸುತ್ತಿದ್ದ.

    ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಯಾಸೀನ್ ತಂದೆ ಎಜಾಜ್ ಖಾನ್ ಆಲಿಯಾಸ್ ದಾದಾಪೀರ್ ಈ ಹಿಂದೆ ಕೆಲ ಕಾಲ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡಿದ್ದ ಎಜಾಜ್ ಖಾನ್ ತನ್ನ ಮಗ ಯಾಸೀನ್ ಗೆ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಲ್ಲದೇ, ಆತನಿಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನ ಮಾಡುವುದರ ಬಗ್ಗೆ ತರಬೇತಿ ನೀಡಿದ್ದ. ಅಪ್ಪನಿಂದ ಕಳ್ಳತನದ ಟ್ರೈನಿಂಗ್ ಪಡೆದಿದ್ದ ಚೋರ್ ಇಮ್ರಾನ್ ಎಂತಹುದೇ ಭದ್ರತೆ ಇದ್ದರೂ ಮನೆಗಳಿಗೂ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಕಳೆದ ತಿಂಗಳು ಎಜಾಜ್ ಖಾನ್ ನನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

    ವರದಿ ಆಂಟೋನಿ ಬೇಗೂರು

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್

    April 15, 2026

    ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ

    April 15, 2026

    ಮಹಿಳೆಯರಿಗೆ ಶೇ. 33 ಮೀಸಲಾತಿ: ‘ನಾರಿ ಶಕ್ತಿ ವಂದನ ಕಾಯ್ದೆ’ಗೆ ಬಿ.ವೈ. ವಿಜಯೇಂದ್ರ ಶ್ಲಾಘನೆ

    April 14, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್

    April 15, 2026

    ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಒಳ ಮೀಸಲಾತಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.…

    ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ

    April 15, 2026

    ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್

    April 15, 2026

    ಡಾ.ಅಂಬೇಡ್ಕರ್ ಸಂವಿಧಾನ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ: ಸಚಿವ ಸಂತೋಷ ಎಸ್.ಲಾಡ್

    April 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.